ದಾವೂದ್ ಇಬ್ರಾಹಿಂಗೆ ವಿಷಪ್ರಾಶನ?: ಕರಾಚಿ ಆಸ್ಪತ್ರೆಯಲ್ಲಿ ವೈದ್ಯರಿಂದ ಚಿಕಿತ್ಸೆ!

ಕರಾಚಿ: ಮೋಸ್ಟ್ ವಾಂಟೆಡ್ ಕ್ರಿಮಿನಲ್ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ವಿಷಪ್ರಾಶನವಾಗಿದ್ದು, ಚಿಕಿತ್ಸೆಯಾಗಿ ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ಬಗ್ಗೆ ವರದಿಯಾಗಿದೆ.
ಕ್ರಿಮಿಲ್ ಚಟುವಟಿಕೆಗೆ ಕುಖ್ಯಾತಿ ಪಡೆದಿರುವ ದಾವೂದ್ ಇಬ್ರಾಹಿಂಗೆ ವಿಷಪ್ರಾಶನವಾಗಿದ್ದು, ಈ ಕಾರಣದಿಂದ ತೀವ್ರವಾಗಿ ಅಸ್ವಸ್ಥಗೊಂಡಿರ ದಾವೂದ್ ನನು ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ, ಕಳೆದ 2 ದಿನಗಳಿಂದಲೂ ಆತ ವೈದ್ಯರ ಆರೈಕೆಯಲ್ಲಿದ್ದಾನೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಈವರೆಗೂ ಆಸ್ಪತ್ರೆಯಿಂದ ಯಾವುದೇ ಮಾಹಿತಿಗಳು ಹೊರಬಿದ್ದಿಲ್ಲ. ಆಸ್ಪತ್ರೆಯ ಮಹಡಿಯಲ್ಲಿ ಏಕೈಕ ವ್ಯಕ್ತಿಯಾಗಿ ಇಬ್ರಾಹಿಂಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಚರ್ಚೆಗಳು, ನಾನಾ ಊಹಾಪೋಹಗಳು ಹರಿದಾಡಿವೆ.
ದಾವೂದ್ ದಾಖಲಾಗಿರುವ ಮಹಡಿಯಲ್ಲಿ ಆಸ್ಪತ್ರೆಯ ಉನ್ನತ ಅಧಿಕಾರಿಗಳು ಮತ್ತು ಹತ್ತಿರದ ಸಂಬಂಧಿಕರಿಗೆ ಮಾತ್ರವೇ ಪ್ರವೇಶ ಕಲ್ಪಿಸಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಮುಂಬೈ ಪೊಲೀಸರು ಚುರುಕಾಗಿದ್ದು, ದಾವೂದ್ ನ ಸಂಬಂಧಿಕರಾದ ಅಲಿಶಾ ಪಾರ್ಕರ್ ಮತ್ತು ಸಾಜಿದ್ ವಾಗ್ಲೆ ಅವರಿಂದ ಮಾಹಿತಿ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ವರದಿ ತಿಳಿಸಿದೆ.