ದಯವಿಟ್ಟು ನನ್ನನ್ನು ಜೈಲಿಗೆ ಸೇರಿಸಿಕೊಳ್ಳಿ: ಪತ್ನಿಯ ಕಾಟ ತಾಳಲಾಗುತ್ತಿಲ್ಲ ಎಂದು ಬೇಡಿಕೊಂಡ ಪತಿ - Mahanayaka
4:24 PM Monday 15 - September 2025

ದಯವಿಟ್ಟು ನನ್ನನ್ನು ಜೈಲಿಗೆ ಸೇರಿಸಿಕೊಳ್ಳಿ: ಪತ್ನಿಯ ಕಾಟ ತಾಳಲಾಗುತ್ತಿಲ್ಲ ಎಂದು ಬೇಡಿಕೊಂಡ ಪತಿ

italy
28/10/2021

ಇಟೆಲಿ: ಮನೆಯಲ್ಲಿ ಪತ್ನಿಯ ಕಾಟ ತಾಳಲಾಗುತ್ತಿಲ್ಲ, ನನ್ನನ್ನು ಜೈಲಿಗೆ ಸೇರಿಸಿಕೊಳ್ಳಿ ಎಂದು ವ್ಯಕ್ತಿಯೋರ್ವ ಪೊಲೀಸರಿಗೆ ಮನವಿ ಮಾಡಿಕೊಂಡಿರುವ ಘಟನೆ ಇಟೆಲಿಯಲ್ಲಿ ನಡೆದಿದ್ದು, ಈತನ ಮನವಿಗೆ ಸ್ಪಂದಿಸಿದ ಪೊಲೀಸರು ಆತನನ್ನು ಜೈಲಿಗೆ ಹಾಕಿದ್ದಾರೆ.


Provided by

30 ವರ್ಷ ವಯಸ್ಸಿನ ಅಲ್ಬೇನಿಯನ್ ಪ್ರಜೆ ಪೊಲೀಸರಿಗೆ ಈ ವಿಚಿತ್ರ ಮನವಿಯನ್ನು ಮಾಡಿದವನಾಗಿದ್ದಾನೆ.  ಕೆಲವು ತಿಂಗಳ ಹಿಂದೆ ಮಾದಕ ವಸ್ತು ಸಂಬಂಧಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಗೃಹ ಬಂಧನದಲ್ಲಿಟ್ಟಿದ್ದರು. ಆದರೆ, ಗೃಹ ಬಂಧನದ ವೇಳೆ ಪತ್ನಿ ತನಗೆ ಟಾರ್ಚರ್ ನೀಡುತ್ತಿದ್ದು, ಇದನ್ನು ಸಹಿಸಲು ತನ್ನಿಂದ ಸಾಧ್ಯವಿಲ್ಲ ಎಂದು ಆರೋಪಿ ಪೊಲೀಸರ ಮೊರೆ ಹೋಗಿದ್ದಾನೆ.

ಮನೆಯಲ್ಲಿ ಇದ್ದು ಕೊಂಡು ಪತ್ನಿಯ ಕಾಟ ಸಹಿಸಲು ನನ್ನಿಂದ ಸಾಧ್ಯವಿಲ್ಲ ಹಾಗಾಗಿ ನನಗೆ ಗೃಹ ಬಂಧನ ಬೇಡ. ನನ್ನನ್ನು ಜೈಲಿನಲ್ಲಿಯೇ ಹಾಕಿ. ಪತ್ನಿಯ ಕಾಟ ಇರುವ ಈ ಮನೆಗಿಂತ ತನಗೆ ಜೈಲೇ ಉತ್ತಮ ಎಂದು ಆತ ಹೇಳಿದ್ದಾನೆ.

ಗೃಹ ಬಂಧನ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದಾರೆ. ಜೈಲು ಸೇರುತ್ತಿದ್ದಂತೆಯೇ ಆತ ಬಹಳಷ್ಟು ಖುಷಿ ಪಟ್ಟಿದ್ದಾನೆ ಎನ್ನಲಾಗಿದೆ. ಸದ್ಯ ಪತ್ನಿಯ ಕಾಟ ಇಲ್ಲ ಎಂದು ಆತ ನೆಮ್ಮದಿಯಲ್ಲಿದ್ದಾನೆ ಎನ್ನಲಾಗಿದೆ. ಸದ್ಯ ಈತನ ಮೇಲೆ ಡ್ರಗ್ಸ್ ಆರೋಪದ ಕುರಿತಂತೆ ವಿಚಾರಣೆ ನಡೆಯುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ