ಕಸ ವಿಲೇವಾರಿ ಘಟಕಕ್ಕೆ ನಾಲ್ಕು ಪ್ರವೇಶ ಮತ್ತು ನಿರ್ಗಮನ ದ್ವಾರದ ವ್ಯವಸ್ಥೆಗೆ ಡಿಸಿಎಂ ಆದೇಶ - Mahanayaka

ಕಸ ವಿಲೇವಾರಿ ಘಟಕಕ್ಕೆ ನಾಲ್ಕು ಪ್ರವೇಶ ಮತ್ತು ನಿರ್ಗಮನ ದ್ವಾರದ ವ್ಯವಸ್ಥೆಗೆ ಡಿಸಿಎಂ ಆದೇಶ

dk shivakumar
13/08/2023


Provided by

ಬೆಂಗಳೂರು: ಬೆಲ್ಲಹಳ್ಳಿ ಹಾಗೂ ಮಿಟಗಾನಹಲ್ಕಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಾಲ್ಕು ಪ್ರವೇಶ ಮತ್ತು ನಿರ್ಗಮನ ದ್ವಾರದ ವ್ಯವಸ್ಥೆ ಮಾಡಲು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಆದೇಶ ನೀಡಿದರು.

ಬೆಲ್ಲಹಳ್ಳಿ ಮತ್ತು ಮಿಟಗಾನಹಳ್ಳಿ ಕಸ ವಿಲೇವಾರಿ ಘಟಕಕ್ಕೆ ಶನಿವಾರ ಮಧ್ಯಾಹ್ನ ಭೇಟಿ ನೀಡಿದ ಅವರು, ಕಸದ ಲಾರಿಗಳು ನೂರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿರುವುದನ್ನು ಗಮನಿಸಿದರು.

ಸುಮಾರು 55 ಎಕರೆ ವಿಸ್ತೀರ್ಣದ ಈ ಘಟಕಕ್ಕೆ ಒಂದೇ ಒಂದು ಪ್ರವೇಶ ಮತ್ತು ನಿರ್ಗಮನ ಕೇಂದ್ರ ಇರುವುದನ್ನು ಗಮನಿಸಿದರು.

ಈ ರೀತಿ ಲಾರಿಗಳು ಸಾಲುಗಟ್ಟಿ ನಿಲ್ಲುವುದು ಸರಿ ಅಲ್ಲ. ಇದರಿಂದ ಸಮಯ ಮತ್ತು ಹಣ ಎರಡೂ ವ್ಯರ್ಥ. ಹೀಗಾಗಿ ತಕ್ಷಣವೇ ನಾಲ್ಕು ದ್ವಾರಗಳನ್ನು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಅದೇಶಿಸಿದರು.

ಜತೆಗೆ ಈಗ ಲಾರಿಗಳು ಅರೇಳು ತಾಸು ಕಾಯುತ್ತಿರುವುದು ಸರಿ ಅಲ್ಲ. ಬಂದ ಎರಡು ಗಂಟೆ ಒಳಗೇ ಕಸ ವಿಲೇವಾರಿ ಮಾಡಿ ನಿರ್ಗಮಿಸುವ ವ್ಯವಸ್ಥೆ ಖಾತರಿ ಮಾಡಿ ಎಂದು ಸೂಚಿಸಿದರು.

ಪ್ರವೇಶ ಕೇಂದ್ರದಲ್ಲಿ ಲಾರಿಗಳ ಆಗಮನ, ಕಸ ವಿಲೇವಾರಿ ಬಗ್ಗೆ ಮಾಹಿತಿ ಪರಿಶೀಲಿಸಿದರು. ಹಿರಿಯ ಐಎಎಸ್ ಅಧಿಕಾರಿಗಳಾದ ರಾಕೇಶ್ ಸಿಂಗ್, ತುಷಾರ್ ಗಿರಿನಾಥ್, ರಾಜೇಂದ್ರ ಚೋಳನ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್ ಜತೆಗಿದ್ದರು.

ಇತ್ತೀಚಿನ ಸುದ್ದಿ