ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆ: ಪತಿ ಕೊಂದಿರುವ ಆರೋಪ - Mahanayaka

ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆ: ಪತಿ ಕೊಂದಿರುವ ಆರೋಪ

chamarajanagar news
15/09/2023


Provided by

ಚಾಮರಾಜನಗರ: ಮಹಿಳೆ ಹಾಗೂ ಇಬ್ಬರು ಮಕ್ಕಳು ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಜಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೇಘ (24), ಪುನ್ವಿತಾ (06),ಮನ್ವಿತಾ( 03) ಮೃತ ದುರ್ದೈವಿಗಳು. ಕೌಟುಂಬಿಕ ಕಲಹ ಆಗಾಗ್ಗೆ ನಡೆಯುತ್ತಿದ್ದು ಎಂದು ತಿಳಿದುಬಂದಿದೆ.

ಪತಿ ಹಾಗೂ ಅತ್ತೆ–ಮಾವ ಕೊಂದಿರುವ ಆರೋಪ:

ಮೇಘಾ ಪತಿ ಅಭಿ @ ಧನಂಜಯ, ಈತನ  ತಾಯಿ ನಿರ್ಮಲಮ್ಮ, ತಂದೆ ಮಲ್ಲಿಕಾರ್ಜುನ ಮತ್ತು ತಮ್ಮ ಪುಟ್ಟು ಜೊತೆಗೆ ಸೇರಿ ತನ್ನ ಹೆಂಡತಿ ಮೇಘ ಮತ್ತು ಇಬ್ಬರೂ ಹೆಣ್ಣು ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದಿದ್ದಾನೆ ಎಂದು ಮೃತ ಮೇಘಳ ತಂದೆ ಆರೋಪಿಸಿದ್ದಾರೆ.

ಇಂದು ಬೆಳಿಗ್ಗೆಯಿಂದಲೂ ಮನೆಯಲ್ಲಿ ಗಲಾಟೆ ನಡೆದಿತ್ತು,  ಗಂಡ ಹಾಗೂ ಆತನ ಮನೆಯವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.  ಸದ್ಯ, ಪತಿ ಅಭಿ ಹಾಗೂ ಅತ್ತೆ-ಮಾವರನ್ನು ಪೊಲೀಸರು ಬಂಧಿಸಿದ್ದಾರೆ. ತೆರಕಣಾಂಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇತ್ತೀಚಿನ ಸುದ್ದಿ