ರಾಷ್ಟ್ರಪಕ್ಷಿ ನವಿಲಿನ ಮೃತದೇಹ ಫಾರೆಸ್ಟ್ ಇಲಾಖೆಗೆ ಹಸ್ತಾಂತರ

ಉಡುಪಿ: ನಗರದ ಬನ್ನಂಜೆ ಶಿರಿಬೀಡು ವಾರ್ಡಿನಲ್ಲಿ ರಾತ್ರಿ ಜೋರಾಗಿ ಮಳೆ ಸುರಿಯುತ್ತಿದ್ದ ಸಮಯದಲ್ಲಿ ಬೀದಿ ನಾಯಿಯೊಂದು ರಾಷ್ಟ್ರ ಪಕ್ಷಿ ನವಿಲಿಗೆ ಕಚ್ಚಿದ್ದು, ಗಾಯಗೊಂಡ ನವಿಲು ಹಾರಲು ಆಗದೆ ಅಸಹಾಯಕ ಸ್ಥಿತಿಯಲ್ಲಿತ್ತು. ತಕ್ಷಣ ಹತ್ತಿರದ ಸುಧಾಕರ್ ಶೆಟ್ಟಿ ಅವರು ತನ್ನ ಮನೆಯಲ್ಲಿ ಆಶ್ರಯ ನೀಡಿ ಒಳಕಾಡು ಅವರಿಗೆ ಮಾಹಿತಿ ನೀಡಿದರು.
ತಕ್ಷಣವೇ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಪಶು ವೈದ್ಯ ಡಾ.ಸಂದೀಪ್ ಕುಮಾರ್ ಅವರಲ್ಲಿ ಚಿಕಿತ್ಸೆಗೆ ಒಳಪಡಿಸಿದರು. ಗಂಭೀರವಾದ ಗಾಯಗೊಂಡ ಅದಾಗಲೇ ಮೃತ ಪಟ್ಟಿರುದಾಗಿ ತಿಳಿಸಿದರು. ನಂತರ ಅರಣ್ಯ ಗಸ್ತು ಪಾಲಕ ಕೇಶವ ಪೂಜಾರಿಗೆ ನವಿಲಿನ ಮೃತದೇಹವನ್ನು ಹಸ್ತಾಂತರಿಸಲಾಯಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw