ರಷ್ಯಾ ದಂಪತಿಯ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆ! - Mahanayaka

ರಷ್ಯಾ ದಂಪತಿಯ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆ!

crime news
18/11/2023


Provided by

ರಷ್ಯಾ ದಂಪತಿಯ ಮೃತದೇಹ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಸಣ್ಣ ಕೊಳದಲ್ಲಿ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.

ಮೃತರನ್ನು ಮಕ್ಸಿಮ್ ಬೆಲೆಟ್ಸ್ಕಿ (37) ಮತ್ತು ಅನ್ನಾ ರಾಂಟ್ಸೇವಾ (21) ಎಂದು ಗುರುತಿಸಲಾಗಿದೆ. ಅವರು ಅಕ್ಟೋಬರ್ 14 ರಿಂದ ಅತಿಥಿ ಗೃಹದಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸ್ ತನಿಖೆಯ ವೇಳೆ ತಿಳಿದು ಬಂದಿದೆ.

ಪವಿತ್ರ ಪಟ್ಟಣ ಮಣಿಕರಣ್ ಬಳಿಯ ಕೊಳದಲ್ಲಿ ಮೃತದೇಹಗಳು ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿವೆ.  ಇಬ್ಬರ ನಗ್ನ ಮೃತದೇಹದ ಮೇಲೆಯೂ ಗಾಯದ ಗುರುತುಗಳು ಪತ್ತೆಯಾಗಿವೆ.

ಮಹಿಳೆಯ ಮೃತದೇಹ ಕುಂಡದೊಳಗೆ ಇದ್ದರೆ, ಮಣಿಕರಣ್ ನಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಪಾರ್ವತಿ ನದಿಯ ದಡದಲ್ಲಿರುವ ಟಗ್ರಿಯಲ್ಲಿರುವ ಕೊಳದ ಹೊರಗೆ ಪುರುಷನ ಶವ ಪತ್ತೆಯಾಗಿದೆ. ಪುರುಷನ ಕೈ ಮತ್ತು ಕುತ್ತಿಗೆಯ ಮೇಲೆ ಕತ್ತರಿಸಿದ ಗುರುತುಗಳಿದ್ದರೆ, ಮಹಿಳೆಯ ಕೈಯಲ್ಲಿ ಗಾಯದ ಗುರುತುಗಳಿವೆ.

ದಂಪತಿಗಳು ಕತ್ತಲಲ್ಲಿ ಹೆಚ್ಚಾಗಿ ಇರುತ್ತಿದ್ದರು, ಲೈಟ್‌ ಬದಲು ಮೇಣದ ಬತ್ತಿ ಉರಿಸುತ್ತಿದ್ದರು ಎಂದು ಇವರು ತಂಗಿದ್ದ ಅತಿಥಿ ಗೃಹದ ಮಾಲೀಕರು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಆತ್ಮಹತ್ಯೆ ಪ್ರಕರಣ ಇರಬಹುದು ಎಂದು ಶಂಕಿಸಲಾಗಿದೆ.

ಇತ್ತೀಚಿನ ಸುದ್ದಿ