ಸಾಲದ ಒತ್ತಡ ತಡೆಯಲು ಆಗುತ್ತಿಲ್ಲ, ನನ್ನನ್ನು ಹುಡುಕಬೇಡಿ: ಪತ್ರ ಬರೆದು ನಾಪತ್ತೆಯಾದ ಅಧಿಕಾರಿ - Mahanayaka

ಸಾಲದ ಒತ್ತಡ ತಡೆಯಲು ಆಗುತ್ತಿಲ್ಲ, ನನ್ನನ್ನು ಹುಡುಕಬೇಡಿ: ಪತ್ರ ಬರೆದು ನಾಪತ್ತೆಯಾದ ಅಧಿಕಾರಿ

jeevish
18/08/2023


Provided by

ಚಾಮರಾಜನಗರ ತಾಲ್ಲೂಕು ಬಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜೀವಿಶ್ ಕುಮಾರ್ ಪತ್ರ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ನಡೆದಿದೆ.

ಯಳಂದೂರು ತಾಲ್ಲೂಕು ಗೂಳಿಪುರ ಗ್ರಾಮದ ಜೀವಿಶ್ ಕುಮಾರ್ ನಾಪತ್ತೆಯಾದವರಾಗಿದ್ದಾರೆ. ಸಾಲದ ಒತ್ತಡ ತಡೆಯಲು ಆಗುತ್ತಿಲ್ಲ, ನನ್ನನ್ನು ಹುಡುಕಬೇಡಿ, ಎಲ್ಲರಿಗೂ ಧನ್ಯವಾದಗಳು ಎಂದು ಅವರು ಪತ್ರ ಬರೆದಿಟ್ಟಿದ್ದಾರೆ.

ಜೀವಿಶ್ ಕುಮಾರ್  ಬೆಳಗ್ಗೆಯಿಂದ ನಾಪತ್ತೆಯಾಗಿದ್ದಾರೆ. ಇವರು ಕಳೆದ ಇಪ್ಪತ್ತು ವರ್ಷಗಳಿಂದ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆಲಸ ಮಾಡುತ್ತಿದ್ದರು.

ಇನ್ನೂ ನಾಪತ್ತೆಯಾದ ಜೀವಿಶ್ ಕುಮಾರ್ ಅವರನ್ನು ಹುಡುಕಿ ಕೊಡುವಂತೆ ಕುಟುಂಬಸ್ಥರು ಸಂತೇಮರಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಇತ್ತೀಚಿನ ಸುದ್ದಿ