ದೆಹಲಿ ಬರ್ಗರ್ ಕಿಂಗ್ ಶೂಟೌಟ್: ಹೊಣೆ ಹೊತ್ತುಕೊಂಡ ಪೋರ್ಚುಗಲ್ ಮೂಲದ ದರೋಡೆಕೋರ - Mahanayaka

ದೆಹಲಿ ಬರ್ಗರ್ ಕಿಂಗ್ ಶೂಟೌಟ್: ಹೊಣೆ ಹೊತ್ತುಕೊಂಡ ಪೋರ್ಚುಗಲ್ ಮೂಲದ ದರೋಡೆಕೋರ

19/06/2024


Provided by

ಬರ್ಗರ್ ಕಿಂಗ್ ಶೂಟೌಟ್ ನಡೆದ ಒಂದು ದಿನದ ನಂತರ ಭಾರತದಿಂದ ಪಲಾಯನ ಮಾಡಿ ಪ್ರಸ್ತುತ ಪೋರ್ಚುಗಲ್‌ನಲ್ಲಿರುವ ವಾಂಟೆಡ್ ಗ್ಯಾಂಗ್ ಸ್ಟಾರ್ ಹಿಮಾಂಶು ಭಾಯ್ ಮಂಗಳವಾರ ರಾತ್ರಿ ಪಶ್ಚಿಮ ದೆಹಲಿಯ ರಾಜೌರಿ ಗಾರ್ಡನ್ನಲ್ಲಿ ನಡೆದ ಕೊಲೆಗೆ ತಾನು ಮತ್ತು ನವೀನ್ ಬಾಲಿ (ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ) ಕಾರಣ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಪಶ್ಚಿಮ ದೆಹಲಿಯ ರಾಜೌರಿ ಗಾರ್ಡನ್‌ನಲ್ಲಿರುವ ಬರ್ಗರ್ ಕಿಂಗ್ ಮಳಿಗೆಯ ಹೊರಗೆ ಒಟ್ಟು 40 ಗುಂಡುಗಳನ್ನು ಹಾರಿಸಲಾಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ದರೋಡೆಕೋರ ಹೇಳಿಕೊಂಡಿದ್ದಾನೆ.
ರಾಜೌರಿ ಗಾರ್ಡನ್ ನಲ್ಲಿ ಹತ್ಯೆಗೀಡಾದ ವ್ಯಕ್ತಿ ನಮ್ಮ ಸಹೋದರ ಶಕ್ತಿ ದಾದಾ ಅವರ ಕೊಲೆಯಲ್ಲಿ ಭಾಗಿಯಾಗಿದ್ದಾನೆ. ಇದು ಸೇಡಿನ ಕೃತ್ಯವಾಗಿದೆ. ಭಾಗಿಯಾಗಿರುವ ಎಲ್ಲರನ್ನೂ ಶೀಘ್ರದಲ್ಲೇ ಗುರಿಯಾಗಿಸಲಾಗುವುದು ಎಂದು ದರೋಡೆಕೋರ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಹೇಳಿದ್ದಾನೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ