ದಿಲ್ಲಿ ಚುನಾವಣಾ ಕದನಕ್ಕೆ ಡೇಟ್ ಫಿಕ್ಸ್: ಒಂದೇ ಹಂತದಲ್ಲಿ ನಡೆಯುತ್ತೆ ಎಲೆಕ್ಷನ್ - Mahanayaka
10:28 AM Tuesday 16 - September 2025

ದಿಲ್ಲಿ ಚುನಾವಣಾ ಕದನಕ್ಕೆ ಡೇಟ್ ಫಿಕ್ಸ್: ಒಂದೇ ಹಂತದಲ್ಲಿ ನಡೆಯುತ್ತೆ ಎಲೆಕ್ಷನ್

07/01/2025

ದೆಹಲಿ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. ದೆಹಲಿಯಲ್ಲಿ ಸಾಂಪ್ರದಾಯಿಕವಾಗಿ ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿದೆ. ಅದು ಈ ಬಾರಿಯೂ ಮುಂದುವರೆದಿದೆ. ಒಟ್ಟು 70 ಸದಸ್ಯ ಬಲದ ದೆಹಲಿಯ ಹಾಲಿ ವಿಧಾನಸಭೆಯ ಅವಧಿ ಫೆಬ್ರವರಿ 23 ರಂದು ಕೊನೆಗೊಳ್ಳಲಿದೆ.


Provided by

ದೆಹಲಿ ವಿಧಾನಸಭಾ ಚುನಾವಣೆ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದ್ದು, ಎಲ್ಲಾ 70 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 5 ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8ರಂದು ಮತ ಎಣಿಕೆ ನಡೆಯಲಿದೆ.

ಚುನಾವಣೆ ದಿನಾಂಕ ಘೋಷಿಸುವ ಮುನ್ನ ಚುನಾವಣಾ ಆಯೋಗದ ಕಳೆದ ವರ್ಷದ ಸಾಧನೆ ಕುರಿತು ಮೆಲುಕು ಹಾಕಿದ ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್‌ ಈ ಬಾರಿ ದೆಹಲಿ ಚುನಾವಣೆಯಲ್ಲಿ ʼಮನಸ್ಸಿನಿಂದ ಮತಹಾಕಿʼ ಎಂದು ಮತದಾರರಿಗೆ ಕರೆ ನೀಡಿದರು.

ದೆಹಲಿ ಚುನಾವಣೆಗೆ ಮತ ಚಲಾವಣೆಗೆ 1.55 ಕೋಟಿ ಅರ್ಹ ಮತದಾರರಿದ್ದು, ಇದರಲ್ಲಿ 71.74 ಲಕ್ಷ ಮಹಿಳಾ ಮತದಾರರಿದ್ದಾರೆ. ಇನ್ನು, ಇದೇ ಮೊದಲ ಬಾರಿಗೆ ಹೊಸದಾಗಿ 2 ಲಕ್ಷ ಯುವ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಏಕ ಹಂತದಲ್ಲಿ ನಡೆಯುವ ಮತದಾನಕ್ಕಾಗಿ 13,000 ಮತ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಮತದಾರರ ಪಟ್ಟಿಗೆ ಅಳಿಸುವಿಕೆ ಅಥವಾ ಸೇರ್ಪಡೆಯಲ್ಲಿ ಕಟ್ಟುನಿಟ್ಟಾದ ಪ್ರಕ್ರಿಯೆ ಅನುಸರಿಸಲಾಗಿದೆ. ಯಾವುದೇ ತಿರುಚುವಿಕೆಗೆ ಅವಕಾಶವಿಲ್ಲ ಎಂದು ಆಯುಕ್ತತು ತಿಳಿಸಿದರು.

ಈ ಬಾರಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಎಎಪಿ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದ್ದು, ಮತದಾರ ಪ್ರಭು ಯಾರಿಗೆ ಜೈ ಎನ್ನುತ್ತಾನೆ ಎಂಬುದು ಸದ್ಯ ಕುತೂಹಲವನ್ನು ಹುಟ್ಟುಹಾಕಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ