6 ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯ ಶವ ಯಮುನಾ ನದಿಯಲ್ಲಿ ಪತ್ತೆ

ನವದೆಹಲಿ: ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ ದೆಹಲಿ ವಿಶ್ವವಿದ್ಯಾಲಯದ 19 ವರ್ಷದ ವಿದ್ಯಾರ್ಥಿನಿ ಸ್ನೇಹ ದೆಬ್ನಾಥ್ ಮೃತದೇಹ ಯಮುನಾ ನದಿಯ ಬಳಿಯ ಗೀತಾ ಕಾಲೋನಿ ಫ್ಲೈಓವರ್ ಬಳಿ ಭಾನುವಾರ ಸಂಜೆ ಸಿಕ್ಕಿದೆ.
ತ್ರಿಪುರ ಮೂಲದ ಸ್ನೇಹ ದಕ್ಷಿಣ ಮುಂಬೈನ ಪರ್ಯವರನ್ ಕಾಂಪ್ಲೆಕ್ಸ್ ನಲ್ಲಿ ವಾಸಿಸುತ್ತಿದ್ದು, ಜುಲೈ 7ರಂದು ಆಕೆ ಕಣ್ಮರೆಯಾಗಿದ್ದಳು. ನಾಪತ್ತೆಗೆ ಮುನ್ನ ಪತ್ರವೊಂದನ್ನು ಬರೆದಿದ್ದ ಆಕೆ ತನ್ನ ಜೀವ ಕಳೆದುಕೊಳ್ಳುವ ನಿರ್ಧಾರ ಮಾಡಿರುವುದಾಗಿ ಸೂಚನೆ ನೀಡಿದ್ದಳು. ಈ ಪ್ರಕರಣ ಕುರಿತು ಮೆಹ್ರುಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ತನಿಖೆಗೆ ಮುಂದಾಗಿದ್ದು, ಆಕೆಯನ್ನು ಸಿಗ್ನೇಚರ್ ಸೇತು ಬಳಿ ಡ್ರಾಪ್ ಮಾಡಿದ್ದಾಗಿ ಕ್ಯಾಬ್ ಚಾಲಕ ತಿಳಿಸಿದ್ದಾನೆ. ಆಕೆಯ ಮೊಬೈಲ್ ಲೊಕೇಷನ್ ಕೂಡ ಕಡೆಯದಾಗಿ ಸಿಗ್ನೇಚರ್ ಸೇತುವೆ ನಲ್ಲಿ ದಾಖಲಾಗಿದೆ ಎಂದು ದಕ್ಷಿಣ ಡಿಸಿಪಿ ಅಂಕಿತ್ ಚೌಹಾಣ್ ತಿಳಿಸಿದ್ದಾರೆ.
ಕೆಲವು ಪ್ರತ್ಯಕ್ಷದರ್ಶಿಗಳು ಹೇಳುವಂತೆ ಆಕೆ ಬ್ರಿಡ್ಜ್ ಬಳಿ ನಿಂತಿದ್ದಳು. ತಕ್ಷಣಕ್ಕೆ ನಿಗಮ್ ಬೋಧ್ ಘಾಟ್ ನಿಂದ ನೋಯ್ಡಾವರೆಗೆ ಸ್ಥಳೀಯ ಪೊಲೀಸರೊಂದಿಗೆ ಎನ್ ಡಿಆರ್ಎಫ್ ಜಂಟಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಆಕೆಯ ಶವ ಭಾನುವಾರ ಸಂಜೆ ಗೀತಾ ಕಾಲೋನಿ ಫ್ಲೈಓವರ್ ಅಡಿ ನದಿಯಲ್ಲಿ ಸಿಕ್ಕಿದ್ದು, ಆಕೆಯ ಕುಟುಂಬಸ್ಥರು ಶವ ಗುರುತು ಪತ್ತೆ ಮಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD