ಬೆಂಗಳೂರಲ್ಲಿ ಹೆಚ್ಚಿದ ಡೆಂಘ್ಯೂ, ಚಿಕನ್ ಗೂನ್ಯಾ

ಬೆಂಗಳೂರು: ರಾಜ್ಯದಲ್ಲಿ ಡೆಂಘ್ಯೂ ಜ್ವರ ಹೆಚ್ಚಾಗಿದ್ದು ಬಿಸಿಲಿನ ತಾಪಮಾನದ ನಡುವೆ ಡೆಂಘೀ ಜ್ವರ ಸದ್ದಿಲ್ಲದೆ ಜನರ ಜೀವ ಹಿಂಡಲು ಮುಂದಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ತಾಪಮಾನದಲ್ಲಿ ಬದಲಾವಣೆ ಎದುರಾಗಿದೆ. ತಾಪಮಾನ ಎರಿಕೆಯ ನಡುವೆ ಕೊರೊನಾ ಹಾಗೂ ಡೆಂಘೀ ಜ್ವರ ಹೆಚ್ಚಾಗಿದೆ.
ಸದ್ಯ ರಾಜ್ಯದಲ್ಲಿ ಕೊರೊನಾಕ್ಕಿಂತ ಹೆಚ್ಚು ಡೆಂಘೀ ಜ್ವರ ಹಾಗೂ ಚಿಕನ್ ಗುನ್ಯಾ ಹಾವಳಿ ಇಡುತ್ತಿದ್ದು, ಮಾರ್ಚ್ ನಿಂದ ನಿರಂತರವಾಗಿ ರಾಜ್ಯದಲ್ಲಿ ಡೆಂಘೀ ಜ್ವರ ಏರಿಕೆಯಾಗಿದೆ. ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ತಲೆಕೆಡಿಸಿಕೊಂಡಿದೆ ಬಿಬಿಎಂಪಿ ಹಾಗೂ ರಾಜ್ಯದಲ್ಲಿ ಕಳೆದ 20 ದಿನಗಳಲ್ಲಿ 246 ಡೆಂಘೀ ಕೇಸ್ ಪತ್ತೆಯಾಗಿದ್ದು 15% ರಿಂದ 20% ರಷ್ಟು ಡೆಂಘೀ ಕೇಸುಗಳಲ್ಲಿ ಸಂಖ್ಯೆಯಲ್ಲಿ ರಾಜ್ಯದಲ್ಲಿ ಏರಿಕೆ ಕಂಡಿದೆ.
ಎಪ್ರಿಲ್ 17-25ರವರೆಗೆ ಒಟ್ಟು 82 ಡೆಂಘೀ ಕೇಸ್ ಪತ್ತೆಯಾಗಿದ್ದು, ಇದರಲ್ಲಿ ಸಿಂಹಪಾಲು ಬೆಂಗಳೂರಿನಲ್ಲಿ 49 ಕೇಸ್ ಪತ್ತೆಯಾಗಿದೆ. ಇನ್ನು ಎಪ್ರಿಲ್ 10 ರಿಂದ 16 ರವೆರೆಗೆ ರಾಜ್ಯದಲ್ಲಿ 94 ಕೇಸ್ ಪತ್ತೆಯಾಗಿದ್ದು, ಎಪ್ರಿಲ್ 3 ರಿಂದ 9 ರವರೆಗೆ 80 ಕೇಸ್ ಪತ್ತೆಯಾಗಿದೆ.
ಇನ್ನು ಸಿಲಿಕಾನ್ ಸಿಟಿಯಲ್ಲಿ ಡೆಂಘೀ ಕೇಸ್ ಹೆಚ್ಚುತ್ತಿದ್ದು ಹೊರ ರೋಗಿಗಳ ವಿಭಾಗದಲ್ಲಿ ಶೇ. 15-20 % ರಷ್ಟು ಏರಿಕೆ ಕಂಡಿದೆ. ಈ ಹಿನ್ನೆಲೆ ವೈದ್ಯರು ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದು ಗುಣಲಕ್ಷಣಗಳಿರುವರಿಗೆ ಟೆಸ್ಟಿಂಗ್ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಸಾರ್ವಜನಿಕರು ಆದಷ್ಟು ಶುಚಿತ್ವ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw