ಚಾರ್ಮಾಡಿ ಘಾಟಿಯಲ್ಲಿ ಕವಿದ ದಟ್ಟ ಮಂಜು: ದಾರಿ ಕಾಣದೇ ಒಂದೇ ದಿನ ಎರಡು ಅಪಘಾತ - Mahanayaka
5:50 AM Thursday 16 - October 2025

ಚಾರ್ಮಾಡಿ ಘಾಟಿಯಲ್ಲಿ ಕವಿದ ದಟ್ಟ ಮಂಜು: ದಾರಿ ಕಾಣದೇ ಒಂದೇ ದಿನ ಎರಡು ಅಪಘಾತ

ksrtc
08/09/2023

ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯಲ್ಲಿ ಮಳೆ ಸುರಿಯುತ್ತಿದ್ದು ದಟ್ಟನೆಯ ಮಂಜು ಕವಿದಿದೆ. ಈ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿವೆ.


Provided by

ಚಾರ್ಮಾಡಿ ಬಿದಿರುತಳ ಬಸ್ ನಿಲ್ದಾಣದ ಅಂತರದಲ್ಲಿ ಮಂಗಳೂರಿಗೆ ಸಾಗುತ್ತಿದ್ದ  ಬೊಲೆರೊ ವಾಹನವೊಂದು ಮಂಜು ಕವಿದ ಕಾರಣ ದಾರಿ ಕಾಣದೇ ತಡೆಗೋಡೆಗೆ ಹತ್ತಿ ಪಲ್ಟಿಯಾಗಿದ್ದು ಅದೃಷ್ಟ ವಶಾತ್ ಬೊಲೇರೊ ವಾಹನದಲ್ಲಿ ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನೊಂದು ಪ್ರಕರಣ ಅಣ್ಣಪ್ಪ ಸ್ವಾಮಿ ದೇವಸ್ಥಾನದಿಂದ ಸ್ವಲ್ಪ ಮುಂದೆ ಕಿರಿ ದಾದ ದಾರಿಯಲ್ಲಿ ಮಂಜು ಮುಸುಕಿದ್ದರಿಂದ ದಾರಿ ಕಾಣದೇ ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಸಾಗುತ್ತಿದ್ದ ಬಸ್, ಆ ಕಡೆಯಿಂದ ಧರ್ಮಸ್ಥಳದಿಂದ ಧಾರವಾಡಕ್ಕೆ ಸಾಗುತ್ತಿದ್ದ ಬೊಲೇನೋ ಕಾರು ಕಿರು ದಾರಿಯಲ್ಲಿ ಅಪಘಾತ ಸಂಭವಿಸಿ  ತಡೆಗೋಡೆ ಕುಸಿದಿದ್ದು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಈ  ಕಿರು ಸ್ಥಳದಲ್ಲಿ ಸಾವಿರ ಅಡಿಯಷ್ಟು  ಪ್ರಫಾತ ಇರುವುದರಿಂದ ತಡೆ ಗೋಡೆ ಕುಸಿದಿದ್ದು, ದಟ್ಟ ಮಂಜು ಕವಿದ ಹಿನ್ನಲೆಯಲ್ಲಿ  ಇನ್ನಷ್ಟು ಅಪಾಯವಾಗುವ ಸಾಧ್ಯತೆಯಿದ್ದು ಹೆದ್ದಾರಿ ಪ್ರಾಧಿಕಾರ ಕೂಡಲೇ ತಡೆಗೋಡೆ ದುರಸ್ತಿ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ