ಶ್ರೀನಗರದಲ್ಲಿ ತೀವ್ರ ಮಂಜು: ಮನೆಯಲ್ಲಿ, ಮಸೀದಿಯಲ್ಲಿ ತಂಗುವುದಕ್ಕೆ ಪ್ರವಾಸಿಗರಿಗೆ ವ್ಯವಸ್ಥೆ - Mahanayaka
9:45 PM Wednesday 17 - September 2025

ಶ್ರೀನಗರದಲ್ಲಿ ತೀವ್ರ ಮಂಜು: ಮನೆಯಲ್ಲಿ, ಮಸೀದಿಯಲ್ಲಿ ತಂಗುವುದಕ್ಕೆ ಪ್ರವಾಸಿಗರಿಗೆ ವ್ಯವಸ್ಥೆ

31/12/2024

ಶ್ರೀನಗರದಲ್ಲಿ ಈಗ ದಟ್ಟ ಮಂಜು. ತೀವ್ರ ಚಳಿ. ಆದರೆ ಈ ಚಳಿ ಮತ್ತು ಮಂಜಿನ ಸುಖವನ್ನ ಅನುಭವಿಸುವುದಕ್ಕೆ ಪ್ರವಾಸಿಗರು ಕುತೂಹಲದಿಂದ ಅಲ್ಲಿಗೆ ಧಾವಿಸುತ್ತಾರೆ. ಹೀಗೆ ಧಾವಿಸಿದವರು ಈ ಮಂಜು ಮತ್ತು ಚಳಿಗೆ ಸಿಲುಕಿ ಒದ್ದಾಡುತ್ತಾರೆ. ಇಂತಹವರಿಗೆ ಕಾಶ್ಮೀರಿಗಳು ತಮ್ಮ ಮನೆಯಲ್ಲಿ ಮತ್ತು ಮಸೀದಿಯಲ್ಲಿ ತಂಗುವುದಕ್ಕೆ ಏರ್ಪಾಡು ಮಾಡುತ್ತಿದ್ದಾರೆ. ಕಾಶ್ಮೀರದ ಶ್ರೀನಗರದಲ್ಲಿ ಇಂಥದ್ದೇ ಒಂದು ಪ್ರೇಮಮಯಿ ಘಟನೆ ನಡೆದಿದೆ.


Provided by

ದಿನಗಳ ಹಿಂದೆ ಶ್ರೀನಗರದಲ್ಲಿ ದಟ್ಟ ಮಂಜು ಆವರಿಸಿತ್ತು. ಅದರ ಜೊತೆಗೆ ಮಳೆಯೂ ಸುರಿಯತೊಡಗಿತು. ಇದರಿಂದಾಗಿ ಶ್ರೀನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ವಿಮಾನಗಳನ್ನು ಕೂಡ ರದ್ದು ಮಾಡಲಾಯಿತು.ಬಳಿಕ ಶ್ರೀನಗರ ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಯಿತು. ಇದರಿಂದಾಗಿ ನೂರಾರು ಪ್ರವಾಸಿಗರು ಸಿಲುಕಿ ಕೊಂಡರು. ಇವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಶ್ರೀನಗರದ ನಿವಾಸಿಗಳು ಆರೈಕೆ ಮಾಡಿದರು ತಮ್ಮ ಮನೆಯಲ್ಲಿ ಇರಿಸಿ ಅವರಿಗೆ ಆಹಾರ ಮತ್ತು ಮಲಗುವ ವ್ಯವಸ್ಥೆಯನ್ನು ಮಾಡಿದ್ದರು. ಹೊದಿಕೆಯನ್ನು ನೀಡಿದರು. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ