ದೇವರಿಗೆ ಪೂಜೆ ಮಾಡಿದ್ರೂ, ಹೈಕಮಾಂಡ್ ಕದ ತಟ್ಟಿದ್ರೂ ಸಿಗಲಿಲ್ಲ ಆನಂದ! - Mahanayaka
10:39 AM Saturday 23 - August 2025

ದೇವರಿಗೆ ಪೂಜೆ ಮಾಡಿದ್ರೂ, ಹೈಕಮಾಂಡ್ ಕದ ತಟ್ಟಿದ್ರೂ ಸಿಗಲಿಲ್ಲ ಆನಂದ!

anand singh
22/08/2021


Provided by

ಬೆಂಗಳೂರು: ಲಾಭದಾಯಕ ಖಾತೆ ಸಿಗಲಿಲ್ಲ ಎಂದು ನಾನಾ ರೀತಿಯ ಕಸರತ್ತು ನಡೆಸಿದರೂ, ಸಚಿವ ಆನಂದ್ ಸಿಂಗ್ ಗೆ ಇನ್ನು ಕೂಡ ಖಾತೆ ಬದಲಾಗಿಲ್ಲ.  ದೇವರಿಗೆ ಅದ್ದೂರಿ ಪೂಜೆ ಮಾಡಿದ್ರು, ಯಾಕೋ ದೇವರು ಕೂಡ ಆನಂದ್ ಸಿಂಗ್ ಅವರತ್ತ ಕಣ್ಣು ಹಾಯಿಸಿ ಕೂಡ ನೋಡುತ್ತಿಲ್ಲ. ಬಿಜೆಪಿ ಹೈಕಮಾಂಡ್ ಅಂತೂ ಆನಂದ್ ಸಿಂಗ್ ಅವರನ್ನು ಕ್ಯಾರೇ ಅನ್ನುತ್ತಿಲ್ಲ, ಇನ್ನೊಂದೆಡೆ ರಾಜ್ಯ ಬಿಜೆಪಿ ನಾಯಕರು ಮುಲಾಮು ಹಚ್ಚಿಯೇ ಆನಂದ್ ಸಿಂಗ್ ಅವರನ್ನು ಸತಾಯಿಸುತ್ತಿದ್ದಾರೆ. ಈ ನಡುವೆ ಆನಂದ್ ಸಿಂಗ್ ಮುಂದೇನು ಮಾಡಬಹುದು ಎಂಬ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ.

ಆನಂದ್ ಸಿಂಗ್ ಅವರಿಗೆ ಸಚಿವ ಸ್ಥಾನ ಸಿಕ್ಕಾಗ ಆದ ಆನಂದ, ಖಾತೆ ಹಂಚಿಕೆವರೆಗೂ ಉಳಿಯಲಿಲ್ಲ. ನನಗೆ ಪರಿಸರ ಖಾತೆ ಬೇಡ, ಪ್ರಬಲವಾದ ಖಾತೆ ಬೇಕು ಎಂದು ಹಠ ಹಿಡಿದಿರುವ ಆನಂದ್ ಸಿಂಗ್, ಆ ಬಳಿಕ ಮಾಡದ ಕಸರತ್ತಿಲ್ಲ. ತಮ್ಮ ಕುಟುಂಬಸ್ಥರ ಜೊತೆಗೆ ದೇವಸ್ಥಾನಕ್ಕೆ ತೆರಳಿ ದೇವರಿಗೆ ಅದ್ದೂರಿಯಾಗಿ ಪೂಜೆ ಮಾಡಿದ್ರು, ರಾಜಕೀಯ ಸನ್ಯಾಸತ್ವದ ಜಿಗುಪ್ಸೆಯ ಮಾತುಗಳನ್ನಾಡಿದರು, ಸೈಲೆಂಟಾಗಿ ದೆಹಲಿಗೆ ಹಾರಿ ವರಿಷ್ಠರ ಕದ ತಟ್ಟಿದರು. ಆದರೂ ಆನಂದ್ ಸಿಂಗ್ ಅವರ ಎಲ್ಲ ಪ್ಲಾನ್ ಗಳೂ ಪಕ್ಕಾ ಪ್ಲಾಪ್ ಆಗಿ ಬಿಟ್ಟವು. ಇದರಿಂದ ಅವರು ಸಾಕಷ್ಟು ಆಕ್ರೋಶಕ್ಕೀಡಾಗಿದ್ದಾರೆ ಎಂದು ಕೂಡ ಹೇಳಲಾಗಿದೆ.

ಈ ಎಲ್ಲ ವಿದ್ಯಮಾನಗಳ ಬಳಿಕ ಸದ್ಯದ ಮಾಹಿತಿಗಳ ಪ್ರಕಾರ ಬಸವರಾಜ್ ಬೊಮ್ಮಾಯಿ ಅವರು ಆನಂದ್ ಸಿಂಗ್ ಗಾಯಕ್ಕೆ ಮುಲಾಮು ಹಚ್ಚಿದ್ದು, ಮೂರು ದಿನಗಳವರೆಗೆ ಕಾಯಿರಿ ಎಂದು ಹೇಳಿದ್ದಾರೆ ಎನ್ನಲಾಗ್ತಿದೆ. ಬಿಜೆಪಿಗೆ ಬಾಹ್ಯವಾಗಿ ಜೆಡಿಎಸ್ ಬೆಂಬಲ ಇರುವ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರ ಯಾವುದೇ ಬ್ಲ್ಯಾಕ್ ಮೇಲ್ ಗಳು ನಡೆಯುತ್ತಿಲ್ಲ. ಹಾಗಾಗಿ ಮೂರು ದಿನಗಳಲ್ಲಿ ಬಸವರಾಜ್ ಬೊಮ್ಮಾತಿ ಅದೇನು ಚಮತ್ಕಾರ ಮಾಡುತ್ತಾರೋ ಗೊತ್ತಿಲ್ಲ. ಆದರೆ ಸಚಿವ ಸ್ಥಾನ ಸಿಕ್ಕರೂ, ಆನಂದ್ ಸಿಂಗ್ ಅವರು ಆನಂದವಾಗಿರದೇ ಇರುವುದು ಇದೀಗ ಸಚಿವ ಸ್ಥಾನ ಸಿಗದ ಶಾಸಕರಿಗೂ ಆಕ್ರೋಶವನ್ನುಂಟು ಮಾಡಿದೆ.

ಇನ್ನಷ್ಟು ಸುದ್ದಿಗಳು…

ಪಾನಿಗೆ ಮೂತ್ರ ಮಾಡಿದ ಜಗ್ ಮುಳುಗಿಸಿದ ಪಾನಿಪುರಿ ಮಾರಾಟಗಾರ: ಈ ವೈರಲ್ ವಿಡಿಯೋದ ಘಟನೆ ಎಲ್ಲಿ ನಡೆದದ್ದು ಗೊತ್ತೆ?

ಜಾತಿಯ ಆಧಾರದ ಮೇಲೆ ನೀಡುವ ಮೀಸಲಾತಿ ನಿಲ್ಲಿಸಬೇಕು | ಮುಖ್ಯಮಂತ್ರಿ ಚಂದ್ರು ಹೇಳಿಕೆ

ಕೊಲೆ ಆರೋಪಿ ಭವ್ಯ ಸ್ವಾಗತ: ಜೈಲಿನಿಂದ ಹೊರ ಬಂದವರೇ ಕಾಂಗ್ರೆಸ್ ಗೆ ಶ್ರೇಷ್ಠರು: ಬಿಜೆಪಿ ಟೀಕೆ

ದಲಿತ ಕೂಲಿ ಕಾರ್ಮಿಕನ ಮೇಲೆ ವಿಷಪೂರಿತ ಆ್ಯಸಿಡ್ ಎರಚಿ, ಮಾರಣಾಂತಿಕ ಹಲ್ಲೆ

ನೋ ಪಾರ್ಕಿಂಗ್ ನಲ್ಲಿದ್ದ ಸವಾರ ಸಹಿತ ಬೈಕ್ ನ್ನು ಹೊತ್ತೊಯ್ದ ಟ್ರಾಫಿಕ್ ಪೊಲೀಸರು!

ಬದುಕಿದ್ದ ಯೋಧನ ಮನೆಗೆ ಹೋಗಿ ಸಾಂತ್ವನ ಹೇಳಿದ ಕೇಂದ್ರ ಸಚಿವ: ಜನಾಶೀರ್ವಾದ ಯಾತ್ರೆಯಲ್ಲಿ ಯಡವಟ್ಟು

ಲೈಂಗಿಕ ಬಯಕೆ ಈಡೇರಿಸಲು ಹೋಗುತ್ತಿದ್ದ ಪುರುಷರಿಗೆ ಬಿಗ್ ಶಾಕ್ ನೀಡುತ್ತಿದ್ದ ಮಹಿಳೆಯರು !

ಇತ್ತೀಚಿನ ಸುದ್ದಿ