ದೇವಸ್ಥಾನಕ್ಕೆ ನುಗ್ಗಿ ದೇವರ ಚಿನ್ನಾಭರಣ ಕದ್ದ ಕಳ್ಳರು - Mahanayaka
10:03 AM Thursday 21 - August 2025

ದೇವಸ್ಥಾನಕ್ಕೆ ನುಗ್ಗಿ ದೇವರ ಚಿನ್ನಾಭರಣ ಕದ್ದ ಕಳ್ಳರು

crime
30/07/2022


Provided by

ಬೆಳ್ತಂಗಡಿ: ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಳೆದ ರಾತ್ರಿ  ಕಳ್ಳರು ನುಗ್ಗಿ ದೇವರ ಚಿನ್ನಾಭರಣ ಕಳವುಗೈದಿದ್ದಾರೆ.

ಇಂದು ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ದೇವರ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಕಳವು ಆಗಿದ್ದು ಸುಮಾರು 4.5 ಲಕ್ಷ ರೂಪಾಯಿ  ಅಂದಾಜಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ಮಾಹಿತಿ ನೀಡಿದ್ದಾರೆ.

ಕಳೆದ ಕೆಲ ತಿಂಗಳುಗಳ ಹಿಂದೆ ದೇವಸ್ಥಾನದ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆದಿತ್ತು. ಸ್ಥಳದಲ್ಲಿ ಬೆಳ್ತಂಗಡಿ ಪೊಲೀಸರಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಗರ್ಭ ಗುಡಿ ಬಾಗಿಲು, ಗಣಪತಿ ಗುಡಿ ಬಾಗಿಲು, ದೇವಳಯದ ಕಚೇರಿ ಎರಡು ಬಾಗಿಲು ಮುರಿದು ಕೃತ್ಯ ಎಸಗಲಾಗಿದೆ.

ದೇವರ ದೃಷ್ಟಿ, ದೇವರ ತಾಳಿ, ಬಲಿ ಮೂರ್ತಿ ತಾಳಿ – ಅಂದಾಜು 29 ಗ್ರಾಂ.  ಬೆಳ್ಳಿ ಕಿರೀಟ, ಬೆಳ್ಳಿ ಕವಚ , ಶಂಖದ ಬೆಳ್ಳಿ ಕವಚ ಮೊದಲಾದ ವಸ್ತುಗಳನ್ನು ಕಳವು ಗೈಯ್ಯಲಾಗಿದೆ.

ಸ್ಥಳಕ್ಕೆ ಮಂಗಳೂರು ಬೆರಳಚ್ಚು ತಜ್ಞರು , ಪೊಲೀಸ್ ನಾಯಿ ಬಂದು ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ