ದೇವರ ಪ್ರಸಾದ ಸೇವಿಸಿದ ಭಕ್ತರು  ವಾಂತಿ, ಹೊಟ್ಟೆನೋವಿನಿಂದ ಅಸ್ವಸ್ಥ - Mahanayaka

ದೇವರ ಪ್ರಸಾದ ಸೇವಿಸಿದ ಭಕ್ತರು  ವಾಂತಿ, ಹೊಟ್ಟೆನೋವಿನಿಂದ ಅಸ್ವಸ್ಥ

hassan
15/07/2025

Mahanayaka — ಹಾಸನ: ಜಾತ್ರಾ ಮಹೋತ್ಸವದಲ್ಲಿ ಆಹಾರ ಸೇವಿಸಿ 50ಕ್ಕೂ ಹೆಚ್ಚು ಮಂದಿ ಭಕ್ತರು ಅಸ್ವಸ್ಥರಾದ ಘಟನೆ  ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹಾಸನದ ಅರಸೀಕೆರೆ ತಾಲೂಕಿನ ಮಾಲೆಕಲ್ ತಿರುಪತಿ ಗ್ರಾಮದಲ್ಲಿ ಇರುವ ವೆಂಕಟೇಶ್ವರ ಸ್ವಾಮಿ ದೇಗುಲದ ಜಾತ್ರೆಯಲ್ಲಿ ಭಾನುವಾರ ರಾತ್ರಿ ಸುಮಾರು ಒಂದುವರೆ ಸಾವಿರ ಜನರಿಗೆ ಆಹಾರ ವಿತರಣೆ ಮಾಡಲಾಗಿತ್ತು. ಈ ದೇಗುಲ ಚಿಕ್ಕ ತಿರುಪತಿ ಇಂದೇ ಪ್ರಸಿದ್ಧವಾಗಿದ್ದು, ಜಾತ್ರೆಗೆ ಸಾವಿರಾರು ಜನ ಆಗಮಿಸಿದ್ದರು.

ಖಾಸಗಿ ಸಂಸ್ಥೆಯೊಂದರ ವತಿಯಿಂದ ಭಕ್ತರಿಗೆ ಮೊಸರನ್ನ ಹಾಗೂ ಬಿಸಿಬೇಳೆ ಬಾತ್ ವಿತರಣೆ ಮಾಡಲಾಗಿತ್ತು. ಭಾನುವಾರ ರಾತ್ರಿ 7.30 ರಿಂದ ಆಹಾರ ವಿತರಣೆ ಮಾಡಲಾಗಿತ್ತು.

ಜಾತ್ರೆಯಲ್ಲಿ ಆಹಾರ ಸೇವಿಸಿದ ಸುಮಾರು 50ಕ್ಕೂ ಹೆಚ್ಚು ಭಕ್ತರಲ್ಲಿ ಸೋಮವಾರ ಮುಂಜಾನೆ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ. ಕೂಡಲೇ ಅಸ್ವಸ್ಥರನ್ನು ಅರಸೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಅಸ್ವಸ್ಥರಾದವರ ಪೈಕಿ 20 ಮಂದಿ ಗುಣಮುಖರಾಗಿದ್ದು, 30ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ಮುಂದುವರೆದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ