ಧರ್ಮಸ್ಥಳ ಪ್ರಕರಣ: ಬಹುಮುಖ್ಯ ಸ್ಪಾಟ್ ನಂಬರ್ 13ರಲ್ಲಿ ಇಂದು ಕಾರ್ಯಾಚರಣೆ: GPR ಬಳಕೆ

ಧರ್ಮಸ್ಥಳ: ಮೃತದೇಹಗಳನ್ನು ಹೂತುಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ಗುರುತಿಸಿರುವ ಸ್ಪಾಟ್ ನಂಬರ್ 13ರಲ್ಲಿ ಇಂದು ಎಸ್ ಐಟಿ ತಂಡ ಕಾರ್ಯಾಚರಣೆ ನಡೆಸಲಿದ್ದು, ಈ ಸಂಬಂಧ ಈಗಾಗಲೇ ಎಸ್ ಐಟಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.
ಸ್ಪಾಟ್ ನಂಬರ್ 13ರಲ್ಲಿ GPR ಬಳಕೆ ಮಾಡುವ ಸಾಧ್ಯತೆ ಇದೆ. ನಿನ್ನೆ GPR ಬಳಕೆಯ ಪರೀಕ್ಷೆಯನ್ನ ಎಸ್ ಐಟಿ ಅಧಿಕಾರಿಗಳು ನಡೆಸಿದ್ದರು. ನೇತ್ರಾವತಿ ಕಿಂಡಿ ಅಣೆಕಟ್ಟು ಬಳಿಯಿರುವ ಸ್ಪಾಟ್ ನಂಬರ್ 13ರಲ್ಲಿ ಇಂದು ಕಾರ್ಯಾಚರಣೆ ನಡೆಯಲಿದೆ.
ನೆಲದ ಮೇಲಿನಿಂದ ಸುಮಾರು 15 ಅಡಿಗಳವರೆಗೆ GPR ಸ್ಕ್ಯಾನ್ ಮಾಡಲಿದ್ದು, ಅಲ್ಲಿ ಕಳೇಬರ ಪತ್ತೆ ಹಚ್ಚುವ ಕಾರ್ಯ ನಡೆಸಲಿದೆ, ಈ ಪ್ರದೇಶದಲ್ಲಿ ಸುಮಾರು 8ಕ್ಕೂ ಅಧಿಕ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ಹೇಳಿಕೆ ನೀಡಿದ್ದ. ಆದ್ರೆ ಈ ಹಿಂದೆ ಬಂದಿರುವ ಪ್ರವಾಹದಿಂದ ಈ ಪ್ರದೇಶದ ಮಣ್ಣು ಕೊಚ್ಚಿ ಹೋಗಿರುವುದಾಗಿಯೂ, ಇಲ್ಲಿ ಅನೇಕ ಕಾಮಗಾರಿಗಳನ್ನು ನಡೆಸಲಾಗಿರುವ ಬಗ್ಗೆ ಸ್ಥಳೀಯರು ಹೇಳಿಕೊಂಡಿದ್ದರು. ಜೊತೆಗೆ ಅನಾಮಿಕ ತೋರಿಸಿದ ಆ ಸ್ಥಳದಲ್ಲೇ ವಿದ್ಯುತ್ ಕಂಬವನ್ನೂ ನೆಡಲಾಗಿದೆ. ಹೀಗಾಗಿ GPR ಬಳಕೆ ಮೂಲಕ ಮಣ್ಣಿನಡಿಯಲ್ಲಿ ಕಳೇಬರ ಇದೆಯೇ ಎನ್ನುವುದನ್ನು ಸ್ಪಷ್ಟಪಡಿಸಿಕೊಂಡು ನಂತರ ಮೃತದೇಹ ಹುಡುಕಾಡಲು ಎಸ್ ಐಟಿ ಅಧಿಕಾರಿಗಳು ಮುಂದಾಗಿದ್ದಾರೆ ಅಂತ ಹೇಳಲಾಗಿದೆ,.
ಇನ್ನೂ ಬಹುಮುಖ್ಯ ಕಾರ್ಯಾಚರಣೆ ಇಂದಿನಿಂದ ಆರಂಭಗೊಳ್ಳುವ ಹಿನ್ನೆಲೆ ಎಸ್ ಐಟಿ ಮುಖ್ಯಸ್ಥರಾದ ಪ್ರಣವ್ ಮೊಹಾಂತಿ ಸ್ಥಳಕ್ಕೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD