ಧರ್ಮಸ್ಥಳ ಪ್ರಕರಣ: ಎಸ್ ಐಟಿ ತನಿಖೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದೇನು? - Mahanayaka

ಧರ್ಮಸ್ಥಳ ಪ್ರಕರಣ: ಎಸ್ ಐಟಿ ತನಿಖೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದೇನು?

g parameshwar
08/09/2025

Dharmasthala case– ಬೆಂಗಳೂರು:  ಎಸ್ ಐಟಿ ತನಿಖೆಯಲ್ಲಿ ತಿರುವುಗಳ ಮೇಲೆ ತಿರುವುಗಳು ಲಭ್ಯವಾಗ್ತಾ ಇದೆ. ಪ್ರಕರಣದ ಮುಖ್ಯ ಬಿಂದುವಾಗಿರುವ ಬಂಗ್ಲಗುಡ್ಡೆಯಲ್ಲಿ ಮತ್ತೆ ಎಸ್ ಐಟಿ ಕಾರ್ಯಾಚರಣೆ ನಡೆಸುತ್ತಾ ಅನ್ನೋ ಮಾತುಗಳು ಕೂಡ ಕೇಳಿ ಬರ್ತಿದೆ. ಈ ನಡುವೆ ಪ್ರಕರಣದ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.


Provided by

ನೀವು(ಮಾಧ್ಯಮಗಳು) ನೋಡುವ ದೃಷ್ಟಿನೇ ಬೇರೆ, ಪೊಲೀಸ್ ನವರು ಎಸ್ ಐಟಿಯವರು ನೋಡುವ ದೃಷ್ಟಿನೇ ಬೇರೆ ತನಿಖೆ ಎಲ್ಲ ಮುಗಿಲಿ, ಏನೆಲ್ಲ ಡೆವಲಪ್ ಮೆಂಟ್ಸ್ ಆಗುತ್ತೆ ಅನ್ನೋದನ್ನ ಎಲ್ಲದಕ್ಕೂ ಕೂಡ ಈಗ ಉತ್ತರ ಕೊಡೋಡಾಗಲಿ, ಪ್ರಚಾರಕ್ಕೆ ತರೋದಾಗ್ಲಿ ಒಳ್ಳೆಯದ್ದಲ್ಲ, ತನಿಖೆ ಸಂಪೂರ್ಣ ಆದ ಮೇಲೆ ನಮಗೆ ಗೊತ್ತಾಗುತ್ತೆ

ಯೂಟ್ಯೂಬರ್ಸ್ ವಿಚಾರಣೆ ನಡೆಯುತ್ತಿದೆ, ಅಲ್ಲಿಂದನೇ ಶುರುವಾಗಿದೆ ಅನ್ನೋವಂತಹದ್ದು ಸ್ಪಷ್ಟ  ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅದು ನಾವು ಯಾವುದಕ್ಕೂ ಹೇಳೋದಿಕೆ ಬರೋದಿಲ್ಲ, ಯಾರು ಯಾರು  ಇದರಲ್ಲಿ ಲಿಂಕ್ ಇದೆ, ಯಾವ್ಯಾವ ಡೈರೆಕ್ಷನ್ ಗೆ ಇನ್ವೆಸ್ಟಿಗೇಶನ್ ಹೋಗ್ತಾ ಇದೆ, ಅದನ್ನು ಅವರು ಮಾಡ್ಕೋಳ್ತಾ ಇದ್ದಾರೆ. ಯೂಟ್ಯೂಬರ್ಸ್ ಇರ್ಬಹುದು, ಮಾಧ್ಯಮದವರು ಇರಬಹುದು, ಸಾರ್ವಜನಿಕರು ಇರ್ಬಹುದು ಅದೆಲ್ಲ ಅಂತಿಮವಾಗಿ ಆಚೆ ಬರುವವರೆಗೆ ನಾವು ಹೇಳಕ್ ಬರಲ್ಲ ಎಂದು ತಿಳಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ