ಧರ್ಮಸ್ಥಳ ಪ್ರಕರಣ: ವಿಶೇಷ ತನಿಖಾ ತಂಡದಲ್ಲಿರುವ ಅಧಿಕಾರಿಗಳು ಯಾರು?

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನಾಲ್ವರು ಐಪಿಎಸ್ ಅಧಿಕಾರಗಳನ್ನೊಳಗೊಂಡ ವಿಶೇಷ ತಂಡ ರಚಿಸಿದೆ.
ರಾಜ್ಯ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಡಾ.ಪ್ರಣವ ಮೊಹಾಂತಿ ಅವರು ಈ ತಂಡದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ನೇಮಕಾತಿ ವಿಭಾಗದ ಉಪ ಪೊಲೀಸ್ ಮಹಾ ನಿರ್ದೇಶಕ ಎಂ.ಎನ್. ಅನುಚೇತನ್, ಸಿಎಆರ್ ಕೇಂದ್ರ ಉಪ ಪೊಲೀಸ್ ಆಯುಕ್ತೆ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷ ಜಿಯೇಂದ್ರ ಕುಮಾರ್ ದಯಾಮ ಅವರನ್ನು ಸದಸ್ಯರಾಗಿ ನಿಯೋಜಿಸಲಾಗಿದೆ.
ಧರ್ಮಸ್ಥಳದ ವಿವಿಧೆಡೆಗಳಲ್ಲಿ ಅತ್ಯಾಚಾರ, ಹತ್ಯೆ ನಡೆಸಲಾಗಿರುವ ನೂರಾರು ಮೃತದೇಹಗಳನ್ನು ಹೂತು ಹಾಕಿಸಲಾಗಿರುವುದಾಗಿ ಸಾಕ್ಷಿಯೊಬ್ಬ ನೀಡಿರುವ ದೂರಿನ ವಿಚಾರಣೆಯನ್ನು ನಡೆಸುವಲ್ಲಿ ಪೊಲೀಸರು ವಿಫಲವಾದ ಬೆನ್ನಲ್ಲೇ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ಡಿಜಿಟಲ್ ಮೀಡಿಯಾಗಳ ನಿರಂತರ ವರದಿಗಳ ನಂತರ ಇದೀಗ ಎಸ್ ಐಟಿಗೆ ಪ್ರಕರಣವನ್ನು ನೀಡಲಾಗಿದೆ. ಮುಂದಿನ ತನಿಖೆಯ ಬಗ್ಗೆ ಕಾದು ನೋಡಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: