ದ.ಕ.ಜಿಲ್ಲಾ ಎಸ್ ಪಿ ಮನವಿ ಮೇರೆಗೆ  ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆದ ಹೋರಾಟಗಾರರು:  ಧರ್ಮಸ್ಥಳ ಪೊಲೀಸ್ ಠಾಣೆ ಚಲೋ - Mahanayaka

ದ.ಕ.ಜಿಲ್ಲಾ ಎಸ್ ಪಿ ಮನವಿ ಮೇರೆಗೆ  ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆದ ಹೋರಾಟಗಾರರು:  ಧರ್ಮಸ್ಥಳ ಪೊಲೀಸ್ ಠಾಣೆ ಚಲೋ

dharmasthala
23/01/2023


Provided by

ಧರ್ಮಸ್ಥಳ ಪೊಲೀಸ್ ಠಾಣೆಯ ಎದುರು ದಿನವಿಡೀ ನಡೆದ ದಲಿತ ಸಂಘಟನೆಗಳ ಪ್ರತಿಭಟನೆ ಕೊನೆಗೂ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ  ಮನವಿಯ ಮೇರೆಗೆ ಹೋರಾಟಗಾರರು ತಾತ್ಕಾಲಿಕವಾಗಿ  ಹಿಂಪಡೆದಿದ್ದಾರೆ.

ಮಂಗಳವಾರ ಎಸ್.ಪಿ. ಅವರೊಂದಿಗೆ ಹೋರಾಟಗಾರರ ಸಭೆ ನಡೆಸುವುದಾಗಿ ಎಸ್.ಪಿ ಅವರು ತಿಳಿಸಿದ್ದು, ಪ್ರತಿಭಟನಾಕಾರರ ಬೇಡಿಕೆಗಳ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಫೆ 5ರ ಒಳಗೆ ಶಿಬಾಜೆ ಗ್ರಾ.ಪಂ ಅಧ್ಯಕ್ಷನ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸದಿದ್ದರೆ, ಫೆ.6ರಂದು ಎಸ್.ಪಿ. ಕಚೇರಿ ಚಲೋ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.

ರಾತ್ರಿ ಎಂಟು ಗಂಟೆಯ ಸುಮಾರಿಗೆ ಕೊನೆಗೂ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಮಹಿಳೆಯರು ಮಕ್ಕಳೂ ಸೆರಿದಂತೆ ಪ್ರತಿಭಟನಾಕಾರರು  ಹೋರಾಟದ ಹಾಡುಗಳೊಂದಿಗೆ ಬಿಸಿಲನ್ನೂ ಲೆಕ್ಕಿಸದೆ ಡಾಮರು ರಸ್ತೆಯಲ್ಲಿ  ಕುಳಿತು ಪ್ರತಿಭಟಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ