ಧರ್ಮಸ್ಥಳ: ಅರಣ್ಯದೊಳಗೆ ಮತ್ತಷ್ಟು ಕಳೇಬರ?: ತನಿಖೆಗೆ ಅಡ್ಡಿ?
ಮಂಗಳೂರು: ಧರ್ಮಸ್ಥಳ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸಾಕ್ಷಿ ದೂರುದಾರ ಹೇಳಿದಂತೆಯೇ ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಕಳೇಬರ ಪತ್ತೆಯಾಗಿತ್ತು. ಇದೀಗ ದೂರುದಾರ ಎಸ್ ಐಟಿ ಅಧಿಕಾರಿಗಳನ್ನು ಅರಣ್ಯದೊಳಗೆ ಕರೆದೊಯ್ದಿದ್ದು, ಹಲವು ಪ್ರದೇಶಗಳನ್ನು ಗುರುತಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಕಳೇಬರ ಪತ್ತೆಯಾಗಿದ್ದ ನೇತ್ರಾವತಿ ಸ್ನಾನಘಟ್ಟದ ಸಮೀಪದ ಅರಣ್ಯದೊಳಗೆ ದೂರುದಾರ, ಎಸ್ ಐಟಿ ಅಧಿಕಾರಿಗಳನ್ನು ಕರೆದೊಯ್ದಿದ್ದಾನೆ. ಇನ್ನೂ ಹಲವಾರು ಪ್ರದೇಶಗಳಲ್ಲಿ ಕಳೇಬರ ಇರುವುದಾಗಿ ದೂರುದಾರ ಹೇಳಿದ್ದಾನೆ ಎನ್ನಲಾಗುತ್ತಿದೆ.
ವಕೀಲರಿಂದ ಗಂಭೀರ ಆರೋಪ: ಧರ್ಮಸ್ಥಳ ಪ್ರಕರಣದಲ್ಲಿ ಒಂದೆಡೆ ಕಳೇಬರ ಹೊರ ತೆಗೆಯುವ ಕಾರ್ಯ ಬಿರುಸಿನಿಂದ ಸಾಗುತ್ತಿದೆ. ಮತ್ತೊಂದೆಡೆ GPR ತಂತ್ರಜ್ಞಾನ ಬಳಕೆ ಮಾಡಿ ಕಳೇಬರವನ್ನು ಹೊರ ತೆಗೆಯುವ ಕಾರ್ಯಕ್ಕೂ ಎಸ್ ಐಟಿ ಮುಂದಾಗಲಿದೆ. ಆದ್ರೆ GPR ತಂತ್ರಜ್ಞಾನ ಬಳಕೆಗೆ ಅಡ್ಡಿ ಉಂಟು ಮಾಡಲಾಗುತ್ತಿದೆ ಅಂತ ಅನನ್ಯಾ ಭಟ್ ತಾಯಿ ಸುಜಾತಾ ಭಟ್ ಪರ ವಕೀಲರು ಆರೋಪಿಸಿದ್ದಾರೆ.
ಭಾರತದಲ್ಲಿ GPR ಯಂತ್ರಗಳನ್ನು ತಯಾರಿಸುವ ಹಾಗೂ ಪೂರೈಸುವ ಖಾಸಗಿ ಕಂಪನಿಗಳ ಸಂಖ್ಯೆ ತುಂಬಾ ಕಡಿಮೆಯಿದೆ. ಈ ಕಾರಣದಿಂದಾಗಿ ಈ ಉಪಕರಣಗಳ ಮಾರುಕಟ್ಟೆಯು ಸಹಜವಾಗಿ ನಿರ್ಬಂಧಿತವಾಗಿದೆ ಎಂದಿದ್ದಾರೆ. ನಾವು ಪಡೆದ ಮಾಹಿತಿಯ ಪ್ರಕಾರ ಲಭ್ಯವಿರುವ GPR ಯಂತ್ರಗಳನ್ನು ಕೆಲ ನಿರ್ದಿಷ್ಟ ಹಾಗೂ ಅಜ್ಞಾತ ಹಿತಾಸಕ್ತಿಗಳು ಮುಂಗಡವಾಗಿ ಬುಕಿಂಗ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ವರದಿ ಆಗಿದೆ. ಈ SIT ತನಿಖೆಗೆ ಯಂತ್ರಗಳನ್ನು ಒದಗಿಸುವ ಬಗ್ಗೆ ಖಾಸಗಿ ಕಂಪನಿಗಳ ಮೇಲೆ ಒತ್ತಡ ಅಥವಾ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಅನುಮಾನವಿದ್ದು, ಈ ಬೆಳವಣಿಗೆ ಅತೀ ಗಂಭೀರವಾಗಿದೆ. ಶೋಧ ಸಾಮಗ್ರಿಗಳ ಲಭ್ಯತೆ ಮೇಲೆ ಪ್ರಭಾವ ಬೀರುವ ಮೂಲಕ ತನಿಖೆಯನ್ನು ಅಡ್ಡಿಪಡಿಸಲಾಗ್ತಿದೆ ಎಂದು ವಕೀಲರು ಆರೋಪಿಸಿದ್ದಾರೆ ಎಂದು ವರದಿ ಆಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























