ಧರ್ಮಸ್ಥಳ: ಪಾಯಿಂಟ್ 1ನಲ್ಲಿ ಮೃತದೇಹ ಸಿಗದಿರಲು ಕಾರಣ ಏನು? - Mahanayaka

ಧರ್ಮಸ್ಥಳ: ಪಾಯಿಂಟ್ 1ನಲ್ಲಿ ಮೃತದೇಹ ಸಿಗದಿರಲು ಕಾರಣ ಏನು?

dharmasthala
30/07/2025


Provided by

ಧರ್ಮಸ್ಥಳ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾಗಿರುವ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಹೂತು ಹಾಕಲಾಗಿರುವ ಕುರುಹುಗಳ ಪತ್ತೆಗೆ ನೆಲ ಅಗೆಯುವ ಕಾರ್ಯ ನಿನ್ನೆ ಆರಂಭಗೊಂಡಿದೆ.

ಸದ್ಯ ಸಾಕ್ಷಿ ದೂರುದಾರ ತಿಳಿಸಿರುವಂತೆ 13 ಜಾಗಗಳನ್ನು ಗುರುತಿಸಲಾಗಿದೆ. ಈ ಪೈಕಿ ನಿನ್ನೆ ಪಾಯಿಂಟ್ 1ನಲ್ಲಿ ಅಗೆಯಲಾಗಿತ್ತು. ಸಂಜೆಯವರೆಗೆ  ಸುಮಾರು 8 ಅಡಿ ಆಳಕ್ಕೆ ಅಗೆದರೂ ಮೃತದೇಹದ ಯಾವುದೇ ಕುರುಹುಗಳು ಪತ್ತೆಯಾಗಲಿಲ್ಲ.

ಮೃತದೇಹ ಪತ್ತೆಯಾಗದೇ ಇರುವುದಕ್ಕೆ ಮುಖ್ಯ ಕಾರಣ ಪಾಯಿಂಟ್ 1 ಇರುವುದು ನೇತ್ರಾವತಿ ನದಿಯಿಂದ ಕೇವಲ 10 ಮೀಟರ್ ನಲ್ಲಿ. ಮಳೆಗಾಲದಲ್ಲಿ ಇದರಲ್ಲಿ ನೀರಿನ ಒರತೆ ಹೆಚ್ಚು ಇದ್ದುದದರಿಂದ ಗುಂಡಿ ಅಗೆಯಲು ಸಮಸ್ಯೆ ಉಂಟಾಯಿತು. ಜೊತೆಗೆ ಈ ಭಾಗದಲ್ಲಿ ಮಳೆ ನೀರು ವೇಗವಾಗಿ ಹರಿಯುವ ಹಿನ್ನೆಲೆ ಹಲವು ವರ್ಷಗಳ ಹಿಂದೆ ಈ ಸ್ಥಳದಲ್ಲಿ ಹೂತಿದ್ದ ಮೃತದೇಹ ನೀರಲ್ಲಿ ಬೇರೆ ಸ್ಥಳಕ್ಕೆ ಹರಿದು ಹೋಗಿರುವ ಸಾಧ್ಯತೆಗಳಲ್ಲಿ ಅಲ್ಲಗಳೆಯುವಂತಿಲ್ಲ.

ಜೆಸಿಬಿ, ಶ್ವಾನ ದಳದ ಮೂಲಕವೂ ಹುಡುಕಾಟ ಕಾರ್ಯಾಚರಣೆ ನಡೆಸಿದರೂ ನಿನ್ನೆ ಮೃತದೇಹ ಸಿಕ್ಕಿಲ್ಲ, ಇದೀಗ ಪಾಯಿಂಟ್ 2, 3, 4ಗಳಲ್ಲಿ ಇಂದು ಮೃತದೇಹಕ್ಕಾಗಿ ಹುಡುಕಾಟ ನಡೆಯಲಿದೆ. ಪಾಯಿಂಟ್ 1 ನಲ್ಲಿ ಮೃತದೇಹ ಸಿಗದ ಹಿನ್ನೆಲೆ ಪಾಯಿಂಟ್ 1ನ್ನು ಸೀಲ್ ಡೌನ್ ಮಾಡಲಾಗಿದೆ. ಮೃತದೇಹ ಹೊರ ತೆಗೆಯುವ ಕಾರ್ಯಾಚರಣೆ ಇಂದು ಮತ್ತೆ  ಮುಂದುವರಿದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ