#ಡೈಪರ್ ಸೂರ್ಯ ಎಕ್ಸ್ ಪೋಸ್ಡ್  (#DiaperSuryaExposed) ಟ್ವಿಟ್ಟರ್ ನಲ್ಲಿ ಶುರುವಾಯ್ತು ಅಭಿಯಾನ - Mahanayaka

#ಡೈಪರ್ ಸೂರ್ಯ ಎಕ್ಸ್ ಪೋಸ್ಡ್  (#DiaperSuryaExposed) ಟ್ವಿಟ್ಟರ್ ನಲ್ಲಿ ಶುರುವಾಯ್ತು ಅಭಿಯಾನ

diapersurya exposed
05/05/2021

ಬೆಂಗಳೂರು: ನಿನ್ನೆ ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣವನ್ನು ಬಯಲಿಗೆಳೆದ ಹೈಡ್ರಾಮಾಕ್ಕೆ ಸಂಬಂಧಿಸಿದಂತೆ ಇಂದು ತೇಜಸ್ವಿ ಸೂರ್ಯ ವಿರುದ್ಧ ಟ್ವಿಟ್ಟರ್ ನಲ್ಲಿ  #DiaperSuryaExposed ಅಭಿಯಾನ ಆರಂಭವಾಗಿದ್ದು, ತೇಜಸ್ವಿ ಸೂರ್ಯ ವಿರುದ್ಧ ಸಾಲು ಸಾಲು ಪೋಸ್ಟ್ ಗಳು ಟ್ವಿಟ್ಟರ್ ನಲ್ಲಿ ಕಂಡು ಬಂದಿದೆ.

ತೇಜಸ್ವಿ ಸೂರ್ಯ ಅವರ ಕಾರ್ಟೂನ್ ಗಳು ಟ್ವಿಟ್ಟರ್ ನಲ್ಲಿ ರಾರಾಜಿಸುತ್ತಿದ್ದು, ಕೇಂದ್ರದಲ್ಲಿಯೂ ತಮ್ಮದೇ ಸರ್ಕಾರ, ರಾಜ್ಯದಲ್ಲಿಯೂ ತಮ್ಮದೇ ಸರ್ಕಾರ, ಬಿಬಿಎಂಪಿಯಲ್ಲಿಯೂ  ಬಿಜೆಪಿಯದ್ದೇ ಆಡಳಿತ. ದಾಳಿ ನಡೆಸುವವರು ಕೂಡ ಬಿಜೆಪಿ ಪಕ್ಷದವರೇ ಆಗಿದ್ದಾರೆ. ಬಿಜೆಪಿ ಸಚಿವರೇ ನಡೆಸುತ್ತಿರುವ ದಂಧೆಯನ್ನು ಯಾರದ್ದೋ ತಲೆಗೆ ಕಟ್ಟಲಾಗುತ್ತಿದೆ ಎಂದು ಟ್ವಿಟ್ಟರ್ ನಲ್ಲಿ ಆಕ್ರೋ ವ್ಯಕ್ತವಾಗಿದೆ.

ಇನ್ನೂ ಹಲವರು ಸಂಸದ ತೇಜಸ್ವಿ ಸೂರ್ಯ ಹಾಗೂ ಪ್ರಕರಣದಲ್ಲಿ ಬಂಧಿತಳಾಗಿರುವ ಮಹಿಳೆ ಒಂದೇ ಪಕ್ಷದವರಾಗಿದ್ದಾರೆ. ಆಕೆ ಬಿಜೆಪಿ ಕಾರ್ಯಕರ್ತೆ ಎಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಇನ್ನೂ ತೇಜಸ್ವಿ ಸೂರ್ಯ ರಾಜಕೀಯಕ್ಕೆ ಕಾಲಿಡುವುದಕ್ಕೂ ಮೊದಲು ಮಾರಕಾಸ್ತ್ರಗಳೊಂದಿಗೆ ಕುಳಿತುಕೊಂಡು ತೆಗೆಸಿರುವ ಫೋಟೋವನ್ನು ಕೂಡ ಹಂಚಿಕೊಳ್ಳಲಾಗಿದೆ.

#ಡೈಪರ್_ಸೂರ್ಯ_ಎಕ್ಸ್ ಪೋಸ್ಡ್  ಎಂಬ ಅಭಿಯಾನ  4ಗಂಟೆಯಿಂದ ಆರಂಭವಾಗಿದೆ. ಟ್ವಿಟ್ಟರ್ ನಲ್ಲಿ ಡೈಪರ್ ಸೂರ್ಯ ಟ್ರೆಂಡ್ ಆಗುವ ಸಾಧ್ಯತೆ ಕಂಡು ಬಂದಿದೆ.]

https://twitter.com/ZameerP18868427/status/1389895745017237506?s=20

https://twitter.com/saroshvolley/status/1389892103447080962?s=20

 

ಇತ್ತೀಚಿನ ಸುದ್ದಿ