ಪ್ರೀತಿಸಿ ಮದುವೆಯಾಗಿದ್ದೇ ಮುಳ್ಳಾಯ್ತಾ..?ದಯಾಮರಣಕ್ಕೆ ದಂಪತಿ ಅರ್ಜಿ - Mahanayaka
12:49 PM Wednesday 27 - August 2025

ಪ್ರೀತಿಸಿ ಮದುವೆಯಾಗಿದ್ದೇ ಮುಳ್ಳಾಯ್ತಾ..?ದಯಾಮರಣಕ್ಕೆ ದಂಪತಿ ಅರ್ಜಿ

chamarajanagar 1
05/09/2023


Provided by

ಚಾಮರಾಜನಗರ: ಪ್ರೀತಿಸಿ ಮದುವೆಯಾಗಿದ್ದೇ ಈ ದಂಪತಿಗಳ ಬಾಳಿಗೆ ಮುಳ್ಳಾಗಿ ಪರಿಣಮಿಸಿದ್ದು ಗಂಡನ ಮನೆಯವರು ನಿರಂತರ ಕಿರುಕುಳ ಕೊಡುತ್ತಿದ್ದಾರೆಂದು ಗಂಡ-ಹೆಂಡತಿ ದಯಾಮರಣಕ್ಕೆ ಅರ್ಜಿ ಹಾಕಿದ್ದಾರೆ.

ಹೌದು…, ಕೊಳ್ಳೇಗಾಲ ತಾಲ್ಲೂಕು ಜಕ್ಕಳ್ಳಿ ಗ್ರಾಮದ ಲ್ಯಾನ್ಸಿ ಲೀನಾ ಹಾಗು ಅರುಳ್ ಸೆಲ್ವ ಎಂಬು ದಂಪತಿ ದಯಾಮರಣಕ್ಕೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿ, ಕಿರುಕುಳ ತಪ್ಪಿಸಿಕೊಳ್ಳಲು ತಮಗೆ ಸಾವೇ ಪರಿಹಾರ ಎಂದು ಅಳಲು ತೋಡಿಕೊಂಡಿದ್ದಾರೆ.

ಏನಿದು ಕಿರುಕುಳ ಕಹಾನಿ:

ಲ್ಯಾನ್ಸಿ ಲೀನಾ ಹಾಗು ಅರುಳ್ ಸೆಲ್ವ ಕಳೆದ 5 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು 2 ಮಕ್ಕಳಿವೆ. ಅತ್ತೆ ಮೋಕ್ಷಾರಾಣಿ ಅವರ ಜಾಗದಲ್ಲಿ ಅವರ ಅನುಮತಿ ಪಡೆದು ಸಾಲ‌ ಮಾಡಿ ಮನೆಯನ್ನು ಕಟ್ಟಿಕೊಂಡಿದ್ದಾರೆ. ಈಗ, ಅತ್ತೆ ಮೋಕ್ಷರಾಣಿ ಮನೆ ಖಾಲಿ ಮಾಡುವಂತೆ ಪೊಲೀಸರಿಗೆ ದೂರು ಕೊಟ್ಟಿದ್ದು ಸೆ.10 ರ ಒಳಗಾಗಿ ಮನೆ ಖಾಲಿ‌ ಮಾಡುವಂತೆ ಪೊಲೂಸರು ಹೇಳಿದ್ದಾರೆ.

ಅವರ ಅನುಮತಿ ಪಡೆದೇ ಮನೆ ಕಟ್ಟಿ ಈಗ ಮನೆ ಖಾಲಿ ಮಾಡಿ ಎಂದರೆ ನಾವು ಹೋಗುವುದು ಎಲ್ಲಿಗೆ..? ಸಾಲದ ಹಣವೂ ಇನ್ನೂ ಮುಗಿದಿಲ್ಲ, ನಾನು 1 ತಿಂಗಳ ಬಾಣಂತಿಯಾಗಿದ್ದು ನಾನು ಎಲ್ಲಿ ಹೋಗಲು ಸಾಧ್ಯ, ಆದ್ದರಿಂದ ನ್ಯಾಯ ಕೊಡಿಸಲಾಗದಿದ್ದರೇ ದಯಾಮರಣ ಕೊಡಿ ಎಂದು ಡಿಸಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿ