ಟಿಕೆಟ್​ ತಪ್ಪಿಸಿದಾಗ ಶೆಟ್ಟರ್​ ಗೆ ದೇಶದ ಹಿತ ಗೊತ್ತಿರಲಿಲ್ವಾ?: ಡಿ.ಕೆ.ಶಿವಕುಮಾರ್ ಪ್ರಶ್ನೆ - Mahanayaka

ಟಿಕೆಟ್​ ತಪ್ಪಿಸಿದಾಗ ಶೆಟ್ಟರ್​ ಗೆ ದೇಶದ ಹಿತ ಗೊತ್ತಿರಲಿಲ್ವಾ?: ಡಿ.ಕೆ.ಶಿವಕುಮಾರ್ ಪ್ರಶ್ನೆ

dk shivakumar
25/01/2024


Provided by

ಬೆಂಗಳೂರು: ನಾವು ಅವರನ್ನ ಬಹಳ ಗೌರವದಿಂದ ನಡೆಸಿಕೊಂಡಿದ್ದೇವೆ. ನನಗೆ ಈವರೆಗೂ ರಾಜೀನಾಮೆ ಪತ್ರ ತಲುಪಿಲ್ಲ. ಶೆಟ್ಟರ್ ಅವರು ಮಾತಾಡಲಿ ಬಳಿಕ ಮುಂದಿನ ದಿನಗಳಲ್ಲಿ ನಾನು ಮಾತಾಡ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್  ಹೇಳಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇಂದು ಬಿಜೆಪಿಗೆ ಸೇರ್ಪಡೆಗೊಂಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ,  ನಿನ್ನೆ ನಾನು ಕರೆ ಮಾತಾಡಿದಾಗ ನಾನು ಹೋಗಲ್ಲ ಎಂದಿದ್ದರು. ನಾವು ಸೀನಿಯರ್​ ಲೀಡರ್​ ಎಂದು ಸ್ಥಾನಮಾನ ಕೊಟ್ಟಿದ್ವಿ. ಈಗ ನಾನು ಫ್ಯಾಕ್ಸ್​​ ನಲ್ಲಿ ರಾಜೀನಾಮೆ ಕೊಟ್ತೇನೆ ಅಂದಿದ್ದಾರೆ ಎಂದರು.

ಒತ್ತಡದಲ್ಲಿ ಕರೆದುಕೊಂಡು ಹೋಗಿದ್ದಾರೋ ಏನೋ ಗೊತ್ತಿಲ್ಲ. ಟಿಕೆಟ್​ ತಪ್ಪಿಸಿದಾಗ ಶೆಟ್ಟರ್​ ಗೆ ದೇಶದ ಹಿತ ಗೊತ್ತಿರಲಿಲ್ವಾ? ನಾವು ಅವರನ್ನ ಬಹಳ ಗೌರವದಿಂದ ನಡೆಸಿಕೊಂಡಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ನನಗೆ ಈವರೆಗೂ ರಾಜೀನಾಮೆ ಪತ್ರ ತಲುಪಿಲ್ಲ. ಶೆಟ್ಟರ್ ಅವರು ಮಾತಾಡಲಿ ಬಳಿಕ ಮುಂದಿನ ದಿನಗಳಲ್ಲಿ ನಾನು ಮಾತಾಡ್ತೇನೆ ಎಂದರು.

ಇತ್ತೀಚಿನ ಸುದ್ದಿ