ಶಂಕಿತ ಉಗ್ರರ ಪೂರ್ವಾಪರ ಮನೆ ಬಾಡಿಗೆ ನೀಡಿದವರಿಗೆ ಸಂಕಷ್ಟ - Mahanayaka

ಶಂಕಿತ ಉಗ್ರರ ಪೂರ್ವಾಪರ ಮನೆ ಬಾಡಿಗೆ ನೀಡಿದವರಿಗೆ ಸಂಕಷ್ಟ

arest
20/07/2023


Provided by

ಬೆಂಗಳೂರು: ಶಂಕಿತ ಉಗ್ರರ ಪೂರ್ವ ಪರ ತಿಳಿಯದೇ ಆಶ್ರಯ ಕೊಟಿದ್ದವರಿಗೆ ಮನೆ ಬಾಡಿಗೆ ನೀಡಿದವರಿಗೆ ಸಂಕಷ್ಟ ಎದುರಾಗಿದೆ.

ಪ್ರತಿಬಾರಿ ಬಾಡಿಗೆ ಮನೆ ಮಾಡುವಾಗಲೂ ಮಹಿಳೆಯರನ್ನು ಮುಂದಿಟ್ಟುಕೊಂಡು ಮನೆ ಹುಡುಕುತ್ತಿದ್ದರು. ಸುಲ್ತಾನ್ ಪಾಳ್ಯದಲ್ಲಿರುವ ಪದ್ಮಾ ಅವರ ಮನೆ ಬಾಡಿಗೆ ಪಡೆಯುವ ಸಂದರ್ಭ ಶಂಕಿತ ಉಗ್ರ ಸೈಯದ್ ಸುಹೇಲ್ನ ಪತ್ನಿ ಕಡೆಯಿಂದ ಮನೆ ಬಾಡಿಗೆ ಪಡೆಯಲಾಗಿತ್ತು. ಅಲ್ಲದೇ ಸೈಯದ್ ಸುಹೇಲ್ ಬಂದ ಎರಡೇ ತಿಂಗಳಿಗೆ ಮನೆ ಖಾಲಿ ಮಾಡುವುದಾಗಿ ಹೇಳಿದ್ದ.

ಸೈಯದ್ ಸುಹೇಲ್ ಖಾನ್ ಮೆಕ್ಯಾನಿಕ್ ಕೆಲಸ ಮಾಡಿಕೊಂಡು ಜೀವನಸಾಗಿಸುತ್ತಿದ್ದ. 2017ರಲ್ಲಿ ನೂರ್ ಅಹ್ಮದ್ ಎಂಬಾತನ ಕೊಲೆ ಕೃತ್ಯಕ್ಕೆ ಸೈಯದ್ ಸುಹೇಲ್ ಇನ್ನೋರ್ವ ಶಂಕಿತ ಉಗ್ರ ಜುನೈದ್‌ಗೆ ಸಾಥ್ ನೀಡಿದ್ದ. ಕೊಲೆ ಪ್ರರಣದಲ್ಲಿ ಜೈಲು ಸೇರಿದ್ದ ಸಮಯದಲ್ಲಿ ಎಲ್‌ಇಟಿ ಶಂಕಿತ ಉಗ್ರ ನಾಸಿರ್ನ ಪರಿಚಯವಾಗಿತ್ತು. ಬಳಿಕ ಜುನೈದ್ ವಿದೇಶಕ್ಕೆ ಪರಾರಿಯಾಗಿದ್ದ.

ಬಂಧಿತ ಐವರು ಶಂಕಿತ ಉಗ್ರರು ಪ್ರತಿ ಆರು ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಮನೆ ಬದಲಾವಣೆ ಮಾಡುತ್ತಿದ್ದರು. ಅಲ್ಲದೇ ಮನೆ ಬಾಡಿಗೆ ಪಡೆಯಲು ಉಗ್ರರು ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದರು. ಎರಡು ತಿಂಗಳ ಹಿಂದಷ್ಟೇ ಗೋವಿಂದಪುರದಿಂದ ಸುಲ್ತಾನ್‌ಪಾಳ್ಯ ಮುಖ್ಯರಸ್ತೆಯಲ್ಲಿರುವ ಮನೆಗೆ ಬಂದಿದ್ದರು. ಶಂಕಿತರು ಒಂದು ಮನೆಯಲ್ಲಿ ಆರು ತಿಂಗಳು ಮಾತ್ರ ವಾಸವಿರುತ್ತಿದ್ದರು. ಒಂದೇ ಮನೆಯಲ್ಲಿ ವರ್ಷಗಟ್ಟಲೆ ಇದ್ದರೆ ಅನುಮಾನ ಬರುತ್ತದೆ ಎಂಬ ಕಾರಣಕ್ಕೆ ಆಗಾಗ ಮನೆ ಬದಲಾಯಿಸುತ್ತಿದ್ದರು.

ವಿದೇಶದಲ್ಲಿದ್ದ ಜುನೈದ್ ಸೂಚನೆ ಮೇರೆಗೆ ಬೆಂಗಳೂರಿನ ಭಯೋತ್ಪಾದಕ ಚಟುವಟಿಕೆಗಳಿಗೆ ಸೈಯದ್ ಸುಹೇಲ್ ಖಾನ್ ಉಸ್ತುವಾರಿ ವಹಿಸಿದ್ದ. ಸುಲ್ತಾನ್‌ಪಾಳ್ಯದಲ್ಲಿದ್ದ ಆತನ ಬಾಡಿಗೆ ಮನೆಯಲ್ಲೇ ವಿಧ್ವಂಸಕ ಕೃತ್ಯಕ್ಕೆ ಸಂಚಿನ ಸಭೆ ನಡೆಸಲಾಗಿತ್ತು. ಅಲ್ಲದೇ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ವಸ್ತುಗಳನ್ನು ಅದೇ ಮನೆಯಲ್ಲಿ ಸಂಗ್ರಹಿಸಿಡಲಾಗಿತ್ತು.

ಮನೆ ಬಾಡಿಗೆ ಕೊಡಬೇಕಾದರೆ ಬಾಡಿಗೆದಾರರ ಪೂರ್ವ ಪರ ತಿಳಿಯದೇ ಮನೆ ಕೊಟ್ಟರೆ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅದೇ ರೀತಿ ಶಂಕಿತ ಉಗ್ರರ ಹಿನ್ನೆಲೆ ಅರಿಯದೆ ಪದ್ಮಾ ಉಗ್ರರಿಗೆ ಮನೆ ಬಾಡಿಗೆ ಕೊಟ್ಟಿದ್ದರು. ಮನೆ ಬಾಡಿಗೆ ಕೊಡಬೇಕಾದರೆ ಪಾಲಿಸಬೇಕಾದ ನಿಯಮ ಪಾಲಿಸದೇ ಮನೆ ಕೊಟ್ಟಿದ್ದಾರೆ. ಅಲ್ಲದೇ ಶಂಕಿತ ವ್ಯಕ್ತಿಗಳಿಂದ ಯಾವುದೇ ಕರಾರು ಪತ್ರ ಪಡೆಯದೇ ಮನೆ ಬಾಡಿಗೆ ಕೊಟ್ಟಿರುವ ಆರೋಪದ ಮೇಲೆ ಪದ್ಮಾ ವಿರುದ್ಧ ಪ್ರಕರಣ ದಾಖಲಿಸಲು ಚಿಂತನೆ ನಡೆಸಲಾಗಿದೆ.

 ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ