ನಿರ್ದೇಶಕನ ಮೇಲೆ ಗುಂಡಿನ ದಾಳಿ: ನಟ ತಾಂಡವ್ ರಾಮ್ ಅರೆಸ್ಟ್! - Mahanayaka
11:02 PM Tuesday 27 - January 2026

ನಿರ್ದೇಶಕನ ಮೇಲೆ ಗುಂಡಿನ ದಾಳಿ: ನಟ ತಾಂಡವ್ ರಾಮ್ ಅರೆಸ್ಟ್!

thandav ram
19/11/2024

ಬೆಂಗಳೂರು: ಜೋಡಿ ಹಕ್ಕಿ, ಒಂದು ಕಥೆ ಹೇಳ್ಲಾ, ಭೂಮಿಗೆ ಬಂದ ಭಗವಂತ ಮೊದಲಾದ ಸೀರಿಯಲ್ ಗಳಲ್ಲಿ ನಟಿಸಿದ್ದ ತಾಂಡವ್ ರಾಮ್ ಇದೀಗ ನಿರ್ದೇಶಕರೊಬ್ಬರ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಆರೋಪದಲ್ಲಿ ಬಂಧನವಾಗಿದ್ದಾರೆ.

ಕೊಲೆ ಯತ್ನ ಪ್ರಕರಣದಲ್ಲಿ ಚಂದ್ರಲೇಔಟ್ ಪೊಲೀಸರು ತಾಂಡವ್ ರಾಮ್ ನನ್ನು ಬಂಧಿಸಿದ್ದಾರೆ. ದೇವನಾಂಪ್ರಿಯ ಎಂಬ ಸಿನಿಮಾದಲ್ಲಿ ತಾಂಡವ್ ನಾಯಕ ನಟನಾಗಿ ಕೆಲಸ ಮಾಡುತ್ತಿದ್ದರು. ಈ ಸಿನಿಮಾ ಅರ್ಧಕ್ಕೆ ನಿಂತಿದ್ದರಿಂದ ಕೋಪಗೊಂಡು ಕೃತ್ಯ ನಡೆಸಿರುವುದಾಗಿ ಹೇಳಲಾಗಿದೆ.

ತಾಂಡವ್ ರಾಮ್ ನಾಯಕನಾಗಿ ನಟಿಸುತ್ತಿದ್ದ ದೇವನಾಂಪ್ರಿಯ ಸಿನಿಮಾ ನಿಂತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಚಂದ್ರಲೇಔಟ್ ನ ಕಚೇರಿಯಲ್ಲಿ  ಮಾತುಕತೆ ನಡೆಯುತ್ತಿತ್ತು. ಈ ವೇಳೆ  ತಾಂಡವ್ ಹಾಗೂ ನಿರ್ದೇಶಕ ಭರತ್ ಗೂ ವಾಗ್ವಾದ ನಡೆದಿತ್ತು. ಈ ವೇಳೆ ತಾಂಡವ್ ಗನ್ ತೆಗೆದು ಭರತ್ ಮೇಲೆ ಗುಂಡು ಹಾರಿಸಿದ್ದಾನೆ.  ಅದೃಷ್ಟವಶಾತ್ ಗುಂಡು ಭರತ್ ಗೆ ಸಿಗದೇ ಗೋಡೆಗೆ ಬಿದ್ದಿದೆ.

ಘಟನೆಗೆ ಸಂಬಂಧಿಸಿದಂತೆ ಭರತ್ ನೀಡಿರುವ ದೂರಿನನ್ವಯ ನಟ ತಾಂಡವ್ ನನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ