ಪತ್ನಿಗಾಗಿ 90 ಸಾವಿರ ರೂಪಾಯಿಯ ಮೊಪೆಡ್ ಖರೀದಿಸಿದ ಭಿಕ್ಷುಕ! - Mahanayaka
4:53 PM Wednesday 10 - September 2025

ಪತ್ನಿಗಾಗಿ 90 ಸಾವಿರ ರೂಪಾಯಿಯ ಮೊಪೆಡ್ ಖರೀದಿಸಿದ ಭಿಕ್ಷುಕ!

couple begging
24/05/2022

ಮಧ್ಯಪ್ರದೇಶ: ಭಿಕ್ಷುಕ ತನ್ನ ಪತ್ನಿಗಾಗಿ 90 ಸಾವಿರ ಮೌಲ್ಯದ ಮೊಪೆಡ್ ಬೈಕ್ ಖರೀದಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು, ನಾಲ್ಕು ವರ್ಷಗಳಿಂದ ಭಿಕ್ಷೆ ಬೇಡಿದ ಹಣದಿಂದ ಈ ಬೈಕ್ ನ್ನು ಖರೀಸುವ ಮೂಲಕ ಹಲವು ಸಂಕಷ್ಟಗಳಿಂದ ಪಾರಾಗಿದ್ದಾನೆ.


Provided by

ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ಭಿಕ್ಷುಕ ಸಂತೋಷ್ ಕುಮಾರ್ ಸಾಹು, ತನ್ನ ಪತ್ನಿಗಾಗಿ ಮೊಪೆಡ್ ಖರೀದಿಸಿದ್ದಾನೆ.  ರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ ನಾಲ್ಕು ವರ್ಷಗಳ ಕಾಲ ಹಣಕ್ಕಾಗಿ ಭಿಕ್ಷೆ ಬೇಡುತ್ತಿದ್ದ.  ಸಾಹು ಮತ್ತು ಪತ್ನಿ ಮುನ್ನಿ ಅಮರವಾರ ಗ್ರಾಮದ ಸುತ್ತಮುತ್ತ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದಾರೆ.

ಸಂತೋಷ್ ಕುಮಾರ್ ಅವರ ಕಾಲುಗಳಿಗೆ ಬಲವಿಲ್ಲ. ಹೀಗಾಗಿ ಪತ್ನಿ ಅವರನ್ನು ಟ್ರೈಸಿಕಲ್ ಮೂಲಕ ತಳ್ಳಿಕೊಂಡು ಊರಿಡೀ ತಳ್ಳುತ್ತಾ ಭಿಕ್ಷೆ ಬೇಡುತ್ತಿದ್ದರು. ಆದರೆ, ಈ ನಡುವೆ ಪತ್ನಿಗೂ ಅನಾರೋಗ್ಯ ಕಾಡಿದ್ದು, ಆಗಾಗ ಬೆನ್ನು ನೋವುಗಳು ಕಾಣಿಸಿಕೊಳ್ಳಲು ಆರಂಭಿಸಿದೆ. ಇದರ ಜೊತೆಗೆ ದಿನಕ್ಕೊಂದು ರೀತಿಯ ಹವಾಮಾನದಿಂದಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚರಿಸುವುದು ಬಹಳ ಕಷ್ಟಕರವಾಗಿತ್ತು.

ತನ್ನನ್ನು ಕಷ್ಟಪಟ್ಟು ತಳ್ಳಿಕೊಂಡು ಹೋಗುತ್ತಿರುವ ಪತ್ನಿಯ ಸ್ಥಿತಿ ನೋಡಿ ಸಂತೋಷ್ ಕುಮಾರ್ ತೀವ್ರವಾಗಿ ನೊಂದು ಕೊಳ್ಳುತ್ತಾರೆ ಮತ್ತು ತಾನೊಂದು ಮೊಪೆಡ್ ಬೈಕ್ ನ್ನು ಖರೀದಿಸಬೇಕು ಎಂದು ತೀರ್ಮಾನಿಸಿ ಅಂದಿನಿಂದ ತಮ್ಮ ದುಡಿಮೆಯಲ್ಲಿ ಉಳಿಕೆ ಮಾಡಿ ಇದೀಗ ಮೊಪೆಟ್ 90 ಸಾವಿರ ರೂಪಾಯಿಯ ಮೊಪೆಡ್ ವಾಹನವನ್ನು ಖರೀದಿಸಿದ್ದಾರೆ.

ಮೊಪೆಡ್ ಖರೀದಿಸುವುದರಿಂದ ಸಿಯೋನಿ, ಇಟಾರ್ಸಿ, ಭೋಪಾಲ್ ಮತ್ತು ಇಂದೋರ್‌ ಗೆ ಪ್ರಯಾಣಿಸಲು ಸುಲಭವಾಯಿತು ಎಂದು ದಂಪತಿಗಳು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

ಇನ್ನೂ ಭಿಕ್ಷುಕನ ಪ್ರಯತ್ನ ಮತ್ತು ಪರಸ್ಪರ ಬಿಟ್ಟು ಕೊಡದಂತಹ ಪ್ರೀತಿಯ ಸಂಬಂಧಕ್ಕೆ ನೆಟ್ಟಿಗರು ಈ ದಂಪತಿಯನ್ನು ಶ್ಲಾಘಿಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

1% ಕಮಿಷನ್ ಪಡೆದದ್ದಕ್ಕೆ ಆರೋಗ್ಯ ಸಚಿವನನ್ನು ಕಿತ್ತೆಸೆದು ಅರೆಸ್ಟ್ ಮಾಡಿಸಿದ ಆಮ್ ಆದ್ಮಿ ಪಕ್ಷ

ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗ ಮಗು ಜೀವಂತ!

ಅಪಾಯಕಾರಿ ಕೆಮಿಕಲ್ ಸೋರಿಕೆ: ಹಲವರು ಆಸ್ಪತ್ರೆ ಗೆ ದಾಖಲು

ಬಿಜೆಪಿ ಪರಿಷತ್ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ :ವಿಜಯೇಂದ್ರಗೆ ನಿರಾಸೆ

ಹಳೆಯ ದ್ವೇಷ: ಉಳ್ಳಾಲದಲ್ಲಿ ಯುವಕನಿಗೆ  ತಂಡದಿಂದ ಚೂರಿ ಇರಿತ

ಇತ್ತೀಚಿನ ಸುದ್ದಿ