ಕರ್ನಾಟಕ ಬಂದ್‌ ಗೆ ಉಡುಪಿ‌ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ - Mahanayaka
10:03 PM Wednesday 22 - October 2025

ಕರ್ನಾಟಕ ಬಂದ್‌ ಗೆ ಉಡುಪಿ‌ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

udupi
29/09/2023

ಉಡುಪಿ: ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ಕರೆ ನೀಡಿರುವ ಕರ್ನಾಟಕ ಬಂದ್‌ ಗೆ ಉಡುಪಿ‌ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಖಾಸಗಿ ಹಾಗೂ ಸರಕಾರಿ ಬಸ್ ಗಳು ಎಂದಿನಂತೆ ಓಡಾಟ ನಡೆಸುತ್ತಿವೆ. ಜಿಲ್ಲೆಯ ಎಲ್ಲೂ ಬಂದ್ ಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ.ಜನ ಸಂಚಾರ ಕೂಡ ಸಾಮಾನ್ಯವಾಗಿರುವುದು ಕಂಡು ಬಂದಿದೆ

ಜಿಲ್ಲೆಯ ಕುಂದಾಪುರ ಕಾರ್ಕಳ ಬೈಂದೂರು ಉಡುಪಿ ಕಾಪು ಹೆಬ್ರಿ ಬ್ರಹ್ಮಾವರ ತಾಲೂಕುಗಳಲ್ಲಿ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರೆದಿದ್ದವು. ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯ  ಕೆಲವು ಶಾಲೆಗೆ ರಜೆ ಘೋಷಿಸುವ ಬಗ್ಗೆ ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ