ರಾಹುಲ್ ಗಾಂಧಿ ಅನರ್ಹತೆ: ಎಲ್ಲರಿಗೂ ಒಂದೇ ಕಾನೂನು—ಸಿಎಂ ಬೊಮ್ಮಾಯಿ - Mahanayaka
10:58 PM Wednesday 10 - September 2025

ರಾಹುಲ್ ಗಾಂಧಿ ಅನರ್ಹತೆ: ಎಲ್ಲರಿಗೂ ಒಂದೇ ಕಾನೂನು—ಸಿಎಂ ಬೊಮ್ಮಾಯಿ

rahul gandhi bommai
25/03/2023

ಬೆಂಗಳೂರು: ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು. ರಾಹುಲ್ ಗಾಂಧಿಗೆ ಒಂದು ಉಳಿದವರಿಗೆ ಇನ್ನೊಂದಿಲ್ಲ.  ದೇಶದಲ್ಲಿ ಕಾನೂನು ವ್ಯವಸ್ಥೆಯಿದ್ದು ಕಾನೂನಿನ  ಪ್ರಕಾರ ಎಲ್ಲಾ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.


Provided by

ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವ ಬಗ್ಗೆ ಇಂದು ಮಾಧ್ಯಮಗಳಿಗೆ  ಪ್ರತಿಕ್ರಿಯೆ ನೀಡಿದ ಅವರು, ಏನು ಮಾತನಾಡಿದರೂ  ನಡೆಯುತ್ತದೆ  ಎನ್ನುವ  ಭಾವನೆ ಇದೆ . ಅವರಿಗೆ ಸರಿಪಡಿಸಿಕೊಳ್ಳಲು ಅವಕಾಶವಿತ್ತು. ಆದರೆ ಅವರು ಸರಿಪಡಿಸಿಕೊಳ್ಳಲಿಲ್ಲ. ವಿರೋಧ ಪಕ್ಷದದವರನ್ನ ಚುನಾವಣೆಯಲ್ಲಿ ಸೋಲಿಸಬೇಕು ಅಥವಾ ಸಂಸತ್ತಿನಲ್ಲಿ  ಚರ್ಚೆ ಮಾಡಬೇಕು. ಅದು ಬಿಟ್ಟು ಹಾದಿಬೀದಿಯಲ್ಲಿ ವೈಯಕ್ತಿಕ ನಿಂದನೆ ಮಾಡಿ ಮಾತನಾಡಿದರೆ, ಖಂಡಿತವಾಗಿಯೂ ಅದಕ್ಕೆ  ಕಾನೂನು ಇದೆ ಎಂದರು.

ರಾಹುಲ್ ಗಾಂಧಿ ಕೇವಲ ವ್ಯಕ್ತಿಯ ವಿರುದ್ಧ ಅಲ್ಲ ಒಂದು ವರ್ಗದ ವಿರುದ್ಧ ಮಾತನಾಡಿದ್ದಾರೆ. ಬಹಳ ಜನರಿಗೆ ಇದರಿಂದ ನೋವಾಗಿದೆ. ಅವರಲ್ಲರೂ ಪ್ರಕರಣ ದಾಖಲಿಸಿ ನ್ಯಾಯಾಲಯ ತೀರ್ಪು ನೀಡಿದೆ ಎಂದರು.

ಕಾದು ನೋಡಿ:

ಕಾಂಗ್ರೆಸ್ ನಿಂದ ಮೊದಲ ಪಟ್ಟಿ ಬಿಡುಗಡೆಯಾಗಿರುವುದರಲ್ಲಿ ಯಾವುದೇ   ಆಶ್ಚರ್ಯವಿಲ್ಲ. ಅದರಲ್ಲಿ  ಹೊಸತನವೇನಿಲ್ಲಾ , ಬಿಜೆಪಿ ಪಟ್ಟಿ  ಬಿಡುಗಡೆ ಕುರಿತು  ಕಾದು ನೋಡಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ  ಸರ್ಕಾರ ರಚನೆ  ನಿಶ್ಚಿತ

ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸುತ್ತಿದ್ದು, 10 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಪ್ರಧಾನಿ ಮೋದಿ ಯವರು  ಬಿಜೆಪಿಯ ವಿಜಯದ ಕಹಳೆಯನ್ನು ಊದಲಿದ್ದಾರೆ ಎಂದರು.

ದಾವಣಗೆರೆಯಿಂದ ವಿಜಯದ ಯಾತ್ರೆ ಪ್ರಾರಂಭವಾಗಲಿದ್ದು,  ಪ್ರಧಾನಿ ಮೋದಿಯ ದೊಡ್ಡ ಬಲ ನಮಗೆ ಇದೆ. ಡಬಲ್ ಇಂಜಿನ್ ಸರ್ಕಾರದ ಒಳ್ಳೆಯ ಕೆಲಸ ಇಟ್ಟುಕೊಂಡು ಜನರ ಆಶಿರ್ವಾದ ಪಡೆಯುತ್ತೇವೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ  ಸರ್ಕಾರ ರಚನೆಯಾಗುವುದು  ನಿಶ್ಚಿತ. ಮೇ ತಿಂಗಳಲ್ಲಿ ಮತ್ತೊಮ್ಮೆ ವಿಜಯೋತ್ಸವಕ್ಕೆ ಮೋದಿಯವರನ್ನ ಕರೆಯುತ್ತೇವೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ