ಖುಷಿ ಸುದ್ದಿ ದಿವ್ಯಾ ವಸಂತ ನಾಪತ್ತೆ! | ಬ್ಲಾಕ್ ಮೇಲ್ ಪ್ರಕರಣದಲ್ಲಿ ಸಿಕ್ಕಿಕೊಂಡ್ರಾ ದಿವ್ಯಾ ವಸಂತ! - Mahanayaka

ಖುಷಿ ಸುದ್ದಿ ದಿವ್ಯಾ ವಸಂತ ನಾಪತ್ತೆ! | ಬ್ಲಾಕ್ ಮೇಲ್ ಪ್ರಕರಣದಲ್ಲಿ ಸಿಕ್ಕಿಕೊಂಡ್ರಾ ದಿವ್ಯಾ ವಸಂತ!

divya vasantha
06/07/2024


Provided by

ಬೆಂಗಳೂರು: ಸ್ಪಾ ಮ್ಯಾನೇಜರ್ ಗೆ ಬ್ಲಾಕ್ ಮೇಲ್ ಮಾಡಿ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇರೆಗೆ ಪೊಲೀಸರು ಖಾಸಗಿ ಚಾನಲ್ ನ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಖುಷಿ ಸುದ್ದಿ ದಿವ್ಯಾ ವಸಂತ ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ವರದಿಯಾಗಿದೆ.

ಖಾಸಗಿ ಚಾನೆಲ್ ನಲ್ಲಿ ಕೆಲಸ ಮಾಡ್ತಿದ್ದ ರಾಜಾನುಕುಂಟೆ ವೆಂಕಟೇಶ್ ಮತ್ತು ಸಂದೇಶ್ ಸುಲಿಗೆ ಪ್ರಕರಣದ ಆರೋಪಿಗಳಾಗಿದ್ದಾರೆ. ಇವರಿಗೆ ಸಹಾಯ ಮಾಡಿದ ಆರೋಪವನ್ನು ದಿವ್ಯಾ ವಸಂತ ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರಿನ ಇಂದಿರಾನಗರದ ಟ್ರೀ ಸ್ಪಾ ಬ್ಯೂಟಿ ಆ್ಯಂಡ್ ಮಸಾಜ್ ಪಾರ್ಲರ್ ಮೇಲೆ ರಹಸ್ಯ ಕಾರ್ಯಾಚರಣೆ ಹೆಸರಿನಲ್ಲಿ ಮಾಡಿದ ವೀಡಿಯೋಗಳನ್ನು ಇಟ್ಟುಕೊಂಡು ಬೆದರಿಸಿದ ಆರೋಪ ಇದಾಗಿದೆ. ವಿಡಿಯೋ ತೋರಿಸಿ ಸ್ಪಾ ಮ್ಯಾನೇಜರ್ ಶಿವಶಂಕರ್ ಗೆ 15 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಕೊನೆಗೆ 8 ಲಕ್ಷ ರೂಪಾಯಿ ಡೀಲ್ ನೀಡುವಂತೆ ತಾಕೀತು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿ ವೆಂಟಕೇಶ್ ಶಿವಶಂಕರ್ ಗೆ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದು, ಹಣ ಕೊಡುವಂತೆ ತಾಕೀತು ಮಾಡಿದ್ದರಂತೆ. ಇಲ್ಲ ಎಂದರೇ ಚಾನಲ್ ನಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದರಂತೆ. ಈ ಸಂಬಂಧ ಸ್ಪಾ ಮ್ಯಾನೇಜರ್ ಶಿವಶಂಕರ್ ನಿಂದ ಜೀವನ್ ಭೀಮಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿ‌ನ ಆಧಾರದ ಮೇಲೆ ಪ್ರಕರಣ ದಾಖಲಿಸಿ ಪೊಲೀಸರು ವೆಂಕಟೇಶ್ ನನ್ನು ಬಂಧನ ಮಾಡಿದ್ದಾರೆ. ಇನ್ನು, ವೆಂಕಟೇಶ್ ಗೆ ಸ್ನೇಹಿತೆ ದಿವ್ಯಾ ವಸಂತ ಎಂಬ ಯುವತಿ ಬ್ಲಾಕ್ ಮೇಲ್ ಮಾಡಲು ಸಹಾಯ ಮಾಡಿರುವ ಆರೋಪ ಕೇಳಿ ಬಂದಿದೆ.

ದಿವ್ಯಾ ವಸಂತ ನಾಪತ್ತೆ!

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ   ದಿವ್ಯಾ ವಸಂತ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು,  ಪೊಲೀಸರು ಆಕೆಯ ಮನೆಗೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.

ಖಾಸಗಿ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದ ದಿವ್ಯಾ ವಸಂತ ಕೆಲವು ತಿಂಗಳ ಹಿಂದೆಯಷ್ಟೇ ಹುದ್ದೆಗೆ ರಾಜೀನಾಮೆ ನೀಡಿ ರಿಯಾಲಿಟಿ ಶೋದಲ್ಲಿ ಭಾಗಿಯಾಗಿದ್ದರು. ಸುಲಿಗೆ ಪ್ರಕರಣ  ಆರೋಪಿ ವೆಂಕಟೇಶ್, ಯೂಟ್ಯೂಬ್ ಚಾಲೆನ್ ಒಂದನ್ನು ಹೊಂದಿದ್ದು, ಕೆಲ ಸಮಯದ ಹಿಂದಷ್ಟೇ ಈ ಚಾಲೆನ್ ನಲ್ಲಿ ನಿರೂಪಕಿಯಾಗಿ ದಿವ್ಯಾ ಕಾಣಿಸಿಕೊಂಡಿದ್ದರು. ಸಂದರ್ಶನದ ವೇಳೆ ಇಬ್ಬರಿಗೂ ಪರಿಚಯ ಆಗಿತ್ತು ಎನ್ನಲಾಗಿದ್ದು, ಬೇಗ ಹಣ ಮಾಡುವ ಉದ್ದೇಶದಿಂದ ಆರೋಪಿಗಳು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ