ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ಅವರ ತಾಯಿ ನಿಧನ - Mahanayaka
2:40 AM Wednesday 10 - December 2025

ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ಅವರ ತಾಯಿ ನಿಧನ

pruthwi ambar
16/07/2022

ಮಂಗಳೂರು:  ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಅವರ ತಾಯಿ ತಾಯಿ ಸುಜಾತ ವೀರಪ್ಪ ಅಂಬರ್ ನಿಧನರಾಗಿದ್ದು,  ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಅವರು ಶುಕ್ರವಾರ ನಿಧನರಾಗಿದ್ದಾರೆ.

ಸುಜಾತಾ ಅವರು ಹಲವು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಶನಿವಾರ ಅವರ ಅಂತ್ಯಕ್ರಿಯೆಯನ್ನು ಕಾಸರಗೋಡಿನ ಉಪ್ಪಳ ಸಮೀಪದ ಐಲದಲ್ಲಿ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ನಟ ಪೃಥ್ವಿ ಅಂಬಾರ್ ಉದಯೋನ್ಮುಖ ನಟರಾಗಿದ್ದು, ಹಲವು ಚಿತ್ರಗಳಲ್ಲಿ ನಟಿಸಿದ್ದ ಅವರು ದಿಯಾ ಚಿತ್ರದ ಮೂಲಕ ಕರ್ನಾಟಕದ ಮನೆ ಮನ ತಲುಪಿದರು. ಶಿವರಾಜ್ ಕುಮಾರ್ ನಟನೆಯ ಭೈರಾಗಿ ಚಿತ್ರದಲ್ಲಿ ನಟಿಸಿದ್ದ ಅವರಿಗೆ ಹೊಸ ಅವಕಾಶಗಳು ಹರಿದು ಬರುವ ವೇಳೆಗೆ ತಮ್ಮ ತಾಯಿಯನ್ನು ಅವರು ಕಳೆದುಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ