ರೇಣುಕಾಚಾರ್ಯ ಯಾಕೆ ಬಂದಿದ್ರು ಅನ್ನೋ ಪ್ರಶ್ನೆಗೆ ಡಿ.ಕೆ.ಶಿವಕುಮಾರ್ ಹೇಳಿದ್ದೇನು ಗೊತ್ತಾ?

ಚಾಮರಾಜನಗರ: ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಚಾಮರಾಜನಗರದಲ್ಲಿ ಡಿ.ಕೆ.ಶಿವಕುಮಾರ್ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ನಾನು ಪಕ್ಷದ ಅಧ್ಯಕ್ಷ, ರಾಜ್ಯದ ಡಿಸಿಎಂ, ಅವರದ್ದು ಏನೇನೋ ಸಮಸ್ಯೆ ಇರುತ್ತೆ, ಕ್ಷೇತ್ರದ ಕೆಲಸಗಳ ಬಗ್ಗೆ ಮಾತಾಡೋಕೆ ಬಂದಿದ್ದರು. ಅವರದ್ದು ಕೆಲವು ವಿಚಾರಗಳಿತ್ತು ಅದಕ್ಕೆ ಬಂದಿದ್ದರು ಎಂದರು.
ನಮಗೆ ಆಪರೇಷನ್ ಹಸ್ತ ಮಾಡುವ ಅವಶ್ಯಕತೆಯಿಲ್ಲ, ಆದರೆ ಕಾಂಗ್ರೆಸ್ ಪಕ್ಷ ಇಷ್ಟಪಡುವವರನ್ನು ಸ್ವಾಗತಿಸುತ್ತೇವೆ. ಅಂತವರನ್ನ ನಿಲ್ಲಿಸಲು ಸಾಧ್ಯ ಇಲ್ಲ. ನಮ್ಮ ಮೇಲೆ ವಿಶ್ವಾಸ ಇಡುವವರಿಗೆ ನಾವು ವಿಶ್ವಾಸ ಇಡಬೇಕಾಗುತ್ತೆ ಎಂದರು.
ಪ್ರಧಾನಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಮೋದಿ ಬರೊ ವಿಚಾರನಾ ಆರ್. ಅಶೋಕ್ ಗೆ ಹೇಳಿಲ್ಲ. ಪಾಪ ಆತನಿಗೆ ಮಾಹಿತಿ ಇಲ್ಲ, ಪ್ರಧಾನ ಮಂತ್ರಿಗಳು ಸಿಎಂ ಬರೋದು ಬೇಡ, ಡಿಸಿಎಂ ಬರೊದು ಬೇಡ ಅಂತಾರೆ, ನಮಗೆ ಸಮಯ ಪ್ರಜ್ಞೆ, ವ್ಯವಹಾರ ಪ್ರಜ್ಞೆ ನಮಗೆ ಇದೆ. ಅವರದೇ ಪಕ್ಷದ ಅಶೋಕ್ ಗೆ ಮಾಹಿತಿ ಇಲ್ಲ, ಪಾರ್ಟಿ ಲೀಡರ್ ಗೆ ಮಾಹಿತಿ ಇಲ್ಲ, ಯಾರೇ ಆದ್ರು ಅವರಿಗೆ ಗೌರವ ಕೊಡೋದು ನಮ್ಮ ಡ್ಯೂಟಿ, ನಮಗೆ ಆ ತಿಳವಳಿಕೆ ಇದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.