ಪ್ರಧಾನಿ ವಿರುದ್ಧ ಡಿಎಂಕೆ ವಿಭಿನ್ನ ಪ್ರತಿಭಟನೆ: ಮೋದಿ ಮುಖದ ಮಾಸ್ಕ್ ಧರಿಸಿ ‘ವಡಾ’ ವಿತರಿಸಿ ಪ್ರೊಟೆಸ್ಟ್

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆಯು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ ಆಯೋಜಿಸಿತು. ಅವರು ಕೇವಲ “ಸುಳ್ಳು ಭರವಸೆಗಳನ್ನು” ನೀಡುತ್ತಾರೆ ಎಂದು ಆರೋಪಿಸಿದರು.
ಡಿಎಂಕೆ ಕಾರ್ಯಕರ್ತರು ಮತ್ತು ಬೆಂಬಲಿಗರು ಮೋದಿ ಮುಖದ ಮಾಸ್ಕ್ ಧರಿಸಿ ‘ವಡಾ’ ವಿತರಿಸಿದರು.
ಕರಿದ ತಿಂಡಿ ವಡಾ ವಿತರಣೆಯು ಜನರನ್ನು ದಾರಿ ತಪ್ಪಿಸುವ ಅಥವಾ ಸುಳ್ಳು ಭರವಸೆಗಳನ್ನು ನೀಡುವ ಸಂಕೇತವಾಗಿದೆ ಎಂದು ಹೇಳಿದ್ದಾರೆ.
ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ, ಮಧುರೈನಲ್ಲಿ ಏಮ್ಸ್ ನಿರ್ಮಾಣ ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿಯ ಭರವಸೆಗಳು ಖಾಲಿ ಆಶ್ವಾಸನೆಗಳಲ್ಲದೆ ಬೇರೇನೂ ಅಲ್ಲ ಎಂದು ಡಿಎಂಕೆ ಕಾರ್ಯಕರ್ತರು ಪ್ರತಿಪಾದಿಸಿದರು.
ಫೆಬ್ರವರಿ 27 ಮತ್ತು ಫೆಬ್ರವರಿ 28ರಂದು ಪಿಎಂ ಮೋದಿಯವರು ತಿರುಪ್ಪೂರ್ ಮತ್ತು ತಿರುನೆಲ್ವೇಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ರಾಜ್ಯವನ್ನು ಭ್ರಷ್ಟಾಚಾರಕ್ಕಾಗಿ ಟೀಕಿಸಿ, ತಮಿಳುನಾಡು ಸರ್ಕಾರವು ಅವರ ಕೇಂದ್ರದಿಂದ ಜಾರಿಗೆ ತಂದ ಪ್ರಯೋಜನ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದರು. ಮೋದಿ ಅವರ ಈ ಹೇಳಿಕೆ ವಿರೋಧಿಸಿ ಅವರ ಮುಖವಾಡ ಧರಿಸಿ ಸುಳ್ಳುಗಾರ ಎಂದು ಪ್ರತಿಬಿಂಬಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth