ಗಡ್ಡ ಬಿಡುವ ಗಂಡಸರನ್ನು ಮದುವೆಯಾಗಲ್ಲ, ಲವ್ ಮಾಡಲ್ಲ: ಯುವತಿಯರಿಂದ ಪ್ರತಿಭಟನೆ - Mahanayaka

ಗಡ್ಡ ಬಿಡುವ ಗಂಡಸರನ್ನು ಮದುವೆಯಾಗಲ್ಲ, ಲವ್ ಮಾಡಲ್ಲ: ಯುವತಿಯರಿಂದ ಪ್ರತಿಭಟನೆ

protest
23/10/2024


Provided by

ಗಡ್ಡ ಬಿಡುವ ಗಂಡಸರ ವಿರುದ್ಧ ಯುವತಿಯರೆಲ್ಲ ಸೇರಿಕೊಂಡು ಪ್ರತಿಭಟನೆ ನಡೆಸಿರುವ ವಿಚಿತ್ರ ಘಟನೆಯೊಂದು ಮಧ್ಯ ಪ್ರದೇಶದ ಇಂದೂರ್ ನಲ್ಲಿ ನಡೆದಿದೆ. ಈ  ಪ್ರತಿಭಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗರೀಬ್ ಹಠಾವೋ ಹೋರಾಟ ನೀವು ಕೇಳಿರಬಹುದು ಆದರೆ ಈ ಯುವತಿಯರು ಗಡ್ಡ  ಹಟಾವೋ, ನೋ ಕ್ಲೀನ್ ಶೇವ್, ನೋ ಲವ್ ಎಂದು ಸ್ಲೋಗನ್ ಬಳಸಿ ಪ್ರತಿಭಟನೆ ನಡೆಸಿದ್ದಾರೆ. ಇವರ ಪ್ರತಿಭಟನೆಯನ್ನು ಕೆಲವರು ಹಾಸ್ಯವಾಗಿ ಪರಿಗಣಿಸಿದರೆ, ಇನ್ನು ಕೆಲವರು ಗಂಭೀರವಾಗಿ ಪರಿಗಣಿಸಿದ್ದಾರೆ.

ಇಂದೋರ್ ಯುವತಿಯರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕ್ಲೀನ್ ಶೇವ್ ಮಾಡದ ಹುಡುಗರನ್ನು ಮದುವೆಯಾಗುವುದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ.

ಗಂಡು ಮಕ್ಕಳಿಗೆ ಗಡ್ಡ ಬಿಡುವುದು ಎಂದರೆ ಫ್ಯಾಷನ್, ಮುಖಕ್ಕೆ ಒಂದು ಗಂಭೀರತೆ ಬರಬೇಕಾದರೆ ಗಡ್ಡ ಬರಬೇಕು ಎನ್ನುವುದು ಗಂಡಸರ ಅಭಿಪ್ರಾಯ.

ಹಾಗೆನೇ ಇತ್ತೀಚೆಗೆ ಗಡ್ಡ ಬಿಡುವ ಫ್ಯಾಷನ್ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಆದರೆ, ಇದೀಗ ಯುವತಿಯರು ಗಡ್ಡ ಬಿಡುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಹಾಗಿದ್ದಾರೆ ಅನ್ನೋ ಅಭಿಪ್ರಾಯಗಳನ್ನು ಘಟನೆಯ ಬೆನ್ನಲ್ಲೇ ಗಂಡಸರು ವ್ಯಕ್ತಪಡಿಸುತ್ತಿರುವುದು ಕಂಡು ಬಂದಿದೆ.

ಗಡ್ಡದ ಮೇಲೆ ಯುವತಿಯರಿಗೇಕೆ ಇಷ್ಟೊಂದು ಕೋಪ ಅನ್ನೋದು ಗಂಡಸರ ಪ್ರಶ್ನೆ,  ಹೀಗೆ ನೂರಾರು ಪ್ರಶ್ನೆಗಳು ಯುವತಿಯರ  ಪ್ರತಿಭಟನೆಯ ವಿಡಿಯೋಗಳ ಕಾಮೆಂಟ್ ಬಾಕ್ಸ್ ಗಳಲ್ಲಿ ಕಾಣಸಿಗುತ್ತವೆ.


ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

ಇತ್ತೀಚಿನ ಸುದ್ದಿ