ಪೊಲೀಸರ ಸಂಯಮವನ್ನು ವೀಕ್ ನೆಸ್ ಅಂತ ತಿಳಿದುಕೊಳ್ಳೋದು ಬೇಡ: ಅನಂತ್ ಕುಮಾರ್ ಹೆಗಡೆಗೆ ಪರಂ ಎಚ್ಚರಿಕೆ - Mahanayaka

ಪೊಲೀಸರ ಸಂಯಮವನ್ನು ವೀಕ್ ನೆಸ್ ಅಂತ ತಿಳಿದುಕೊಳ್ಳೋದು ಬೇಡ: ಅನಂತ್ ಕುಮಾರ್ ಹೆಗಡೆಗೆ ಪರಂ ಎಚ್ಚರಿಕೆ

parameshwara
18/01/2024


Provided by

ಬೆಂಗಳೂರು: ಪೊಲೀಸರ ಸಂಯಮವನ್ನು ವೀಕ್ ನೆಸ್ ಅಂತ ತಿಳಿದುಕೊಳ್ಳೋದು ಬೇಡ ಎಂದು ವಿವಾದಿತ ಸಂಸದ ಅನಂತ್ ಕುಮಾರ್ ಹೆಗಡೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಂಸದರು ಇಂತಹ ಮಾತುಗಳನ್ನು ಮುಂದುವರಿಸಿದರೆ ಕ್ರಮಕೈಗೊಳ್ಳುತ್ತೇವೆ. ಕೂಡಲೇ ಪ್ರಚೋದನಾಕಾರಿ ಹೇಳಿಕೆಯನ್ನು ನಿಲ್ಲಿಸಬೇಕು ಎಂದು ಪರಮೇಶ್ವರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಅವರೊಬ್ಬರ ನಾಯಕ ಅನ್ನೋ ಕಾರಣಕ್ಕೆ ಪೊಲೀಸರು ಸಂಯಮದಿಂದ ವರ್ತಿಸಿದ್ದಾರೆ. ಅದನ್ನ ವೀಕ್ ನೆಸ್ ಅಂತ ತಿಳಿದುಕೊಳ್ಳೋದು ಬೇಡ, ಅವರ ಸ್ಥಾನಕ್ಕೆ ಗೌರವಕೊಡಬೇಕು ಅನ್ನೋ ಕಾರಣಕ್ಕೆ ಪೊಲೀಸರು ಹೆಜಿಟೇಟ್ ಮಾಡ್ತಾರೆ ಅನಿವಾರ್ಯವಾದ್ರೆ ಕ್ರಮಕೈಗೊಳ್ಳುತ್ತಾರೆ ಎಂದು ಪರಮೇಶ್ವರ್ ಎಚ್ಚರಿಕೆ ನೀಡಿದರು.

ಇತ್ತೀಚಿನ ಸುದ್ದಿ