ಬೆಕ್ಕು ಅಂದುಕೊಂಡು ಚಿರತೆಯನ್ನು ಓಡಿಸಿದ ಬೀದಿನಾಯಿಗಳು, ಹತ್ತಿರ ಹೋಗಿ ನೋಡಿದಾಗ ನಾಯಿಪಾಡು ಹೇಳತೀರದು!

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಚಿರತೆಯೊಂದನ್ನು ಬೀದಿನಾಯಿಗಳ ಗುಂಪು ಬೆನ್ನಟ್ಟುತ್ತಿರುವುದು ಮತ್ತು ಸ್ವಲ್ಪ ಸಮಯದ ನಂತರ ಬೀದಿನಾಯಿಗಳು ದಿಕ್ಕಾಪಾಲಾಗಿ ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರನ್ನು ಬಿದ್ದು ಬಿದ್ದು ನಗುವಂತೆ ಮಾಡಿದೆ.
15 ಸೆಕೆಂಡುಗಳ ವಿಡಿಯೋ ಇದೀಗ ವೈರಲ್ ಆಗ್ತಿದೆ, ವಿಡಿಯೋದಲ್ಲಿ ಚಿರತೆಯೊಂದು ರಸ್ತೆಯನ್ನು ದಾಟಿ ತನ್ನ ಪಾಡಿಗೆ ತಾನು ಹೋಗುತ್ತದೆ. ಅದೇ ಸಮಯದಲ್ಲಿ 9 ಬೀದಿನಾಯಿಗಳು ಚಿರತೆಯಿಂದ ಸ್ವಲ್ಪ ದೂರದಲ್ಲಿ ಅದನ್ನು ಬೆನ್ನಟ್ಟಲು ಮುಂದಾಗುತ್ತಾ ಹೋಗುತ್ತದೆ. ಆದ್ರೆ ಅದೇ ಸಮಯದಲ್ಲಿ ಬೆನ್ನಟ್ಟಲು ಹೋದ ಬೀದಿನಾಯಿಗಳು ಎದ್ದೂ ಬಿದ್ದು ಓಡುತ್ತಿರುವುದು ದೃಶ್ಯ ವಿಡಿಯೋದಲ್ಲಿದೆ.
ನೆಟ್ಟಿಗರು ಹೇಳುವಂತೆ ಬೀದಿನಾಯಿಗಳು ಚಿರತೆಯನ್ನು ದೊಡ್ಡ ಬೆಕ್ಕು ಅಂದು ಕೊಂಡು ರಾಜಾರೋಷವಾಗಿ ಬೆನ್ನಟ್ಟಲು ಮುಂದಾಗಿದೆ. ಆದ್ರೆ, ಅದರ ಸಮೀಪ ತಲುಪುವ ವೇಳೆ ಇದು ಚಿರತೆ ಎಂದು ಗೊತ್ತಾಗಿದ್ದು, ಅಲ್ಲಿಂದ ಎದ್ದೂಬಿದ್ದು ಓಡಿ ಪ್ರಾಣ ಉಳಿಸಿಕೊಂಡಿದೆ. ಎಷ್ಟು ವೇಗವಾಗಿ ಬೀದಿನಾಯಿಗಳು ಬೆನ್ನಟ್ಟಿದ್ದವೋ ಅದೇ ವೇಗದಲ್ಲಿ ತಿರುಗಿ ಓಡುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಜುಲೈ 3ರಂದು ರಾತ್ರಿ 11 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಚಿರತೆಯನ್ನು ಬೆಕ್ಕು ಎಂದು ಭಾವಿಸಿ ಬೆನ್ನಟ್ಟಿ ಹೋದ ಬೀದಿನಾಯಿಗಳು, ಅದು ಚಿರತೆ ಎಂದು ತಿಳಿದು ತಕ್ಷಣ, ಬದುಕಿದ್ದರೆ ಬೇಡಿ ತಿನ್ನುವೆ ಎಂಬಂತೆ ಎದ್ದೂ ಬಿದ್ದು ಓಡುತ್ತಿರುವ ದೃಶ್ಯ ಕಂಡು ಬಂತು.
They thought it’s just a CAT😭
pic.twitter.com/EO6P9Z4ODi— Ghar Ke Kalesh (@gharkekalesh) July 15, 2025
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: