ತಾನು ಅಧಿಕಾರಕ್ಕೆ ಬಂದ್ರೆ ಫೆಲೆಸ್ತೀನ್ ಪರ ಇರುವವರನ್ನು ಗಡಿಪಾರು ಮಾಡ್ತೀನಿ: ಡೊನಾಲ್ಡ್ ಟ್ರಂಪ್ ಹೇಳಿಕೆ

ತಾನು ಮರಳಿ ಅಧಿಕಾರಕ್ಕೆ ಬಂದರೆ ಫೆಲೆಸ್ತೀನ್ ಪರ ಪ್ರತಿಭಟಿಸುತ್ತಿರುವವರನ್ನು ಗಡಿಪಾರು ಮಾಡುವುದಾಗಿ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ನ್ಯೂಯಾರ್ಕ್ ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ತಿಂಗಳಲ್ಲಿ ಅಮೇರಿಕಾದಲ್ಲಿ ಫೆಲಸ್ತೀನಿ ಪರ ಸಾಕಷ್ಟು ಪ್ರತಿಭಟನೆಗಳು ನಡೆದಿವೆ.
ನಾನೊಂದು ಕೆಲಸ ಮಾಡುವೆ. ಯಾವ ವಿದ್ಯಾರ್ಥಿ ಪ್ರತಿಭಟಿಸುತ್ತಾರೋ ಆ ವಿದ್ಯಾರ್ಥಿಯನ್ನು ದೇಶದಿಂದ ಹೊರ ಹಾಕುವೆ. ನಿಮಗೆ ಗೊತ್ತೇ ಸಾಕಷ್ಟು ವಿದೇಶಿ ವಿದ್ಯಾರ್ಥಿಗಳು ಇಲ್ಲಿದ್ದಾರೆ ಎಂದವರು ಹೇಳಿದ್ದಾರೆ. ಕಳೆದ ಎಪ್ರಿಲ್ ನಲ್ಲಿ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಫೆಲೆಸ್ತೀನ್ ಪರ ಪರ ಪ್ರತಿಭಟನೆ ಸ್ಪೋಟಗೊಂಡಿತ್ತು. ಇದೇ ವೇಳೆ ಗಾಝಾದ ಮೇಲೆ ನಡೆಯುತ್ತಿರುವ ದಾಳಿಯನ್ನು ನಿಲ್ಲಿಸಬೇಕು, ಶಾಂತಿಯೆಡೆಗೆ ಮರಳಬೇಕು. ಜನರನ್ನು ಕೊಲ್ಲುವುದನ್ನು ನಿಲ್ಲಿಸಿ ಎಂದು ಕೂಡ ಅವರು ಆಗ್ರಹಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth