ಕತ್ತಲಲ್ಲಿ ನನ್ನ ಹುಡುಕ್ ಬೇಡ ಗುರು, ನಾನು ಆಥರ ಅಲ್ಲ: ಪ್ರತಾಪ್ ಸಿಂಹಗೆ  ಪ್ರದೀಪ್ ಈಶ್ವರ್ ತಿರುಗೇಟು - Mahanayaka

ಕತ್ತಲಲ್ಲಿ ನನ್ನ ಹುಡುಕ್ ಬೇಡ ಗುರು, ನಾನು ಆಥರ ಅಲ್ಲ: ಪ್ರತಾಪ್ ಸಿಂಹಗೆ  ಪ್ರದೀಪ್ ಈಶ್ವರ್ ತಿರುಗೇಟು

pradeep eshwar
24/10/2025

ಬೆಂಗಳೂರು: ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಚಿಕ್ಕಬಳ್ಳಾಪುರ ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್​ ನಡುವಿನ ವಾಕ್ ಸಮರ ತೀವ್ರಗೊಂಡಿದೆ.  ಪ್ರದೀಪ್ ಈಶ್ವರ್ ಕತ್ತಲಲ್ಲಿ ಕಾಣಲ್ಲ, ಬೆಳಕಲ್ಲಿ ಹೊಳೆಯಲ್ಲ, ನಮ್ಮ ತಂದೆ ವಯಸ್ಸಿನಲ್ಲಿ ಇದ್ದಾಗ ಚಿಕ್ಕಬಳ್ಳಾಪುರ ಕಡೆ ಬಂದಿದ್ರೆ ನೀನು ಸುಂದರವಾಗಿ ಹುಟ್ಟುತ್ತಿದ್ದೆ ಎಂದು ಪ್ರತಾಪ್ ಸಿಂಹ ವೈಯಕ್ತಿಕ ದಾಳಿ ನಡೆಸಿದ ಬೆನ್ನಲ್ಲೇ ಪ್ರದೀಪ್ ಈಶ್ವರ್ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀನು ನನ್ನನ್ನು ಒಬ್ಬಪ್ಪನಿಗೆ ಹುಟ್ಟಿದ್ಯಾ ಅಂದೆ, ನಾನು ಆಸ್ತಿಯಲ್ಲಿ ಭಾಗಬೇಕಾ ಅಂದೆ,  ಈವಾಗ ನನ್ನ ತಾಯಿಯ ಬಗ್ಗೆ ನೀನು ಕೇವಲವಾಗಿ ಮಾತನಾಡಿದ್ದಿ. ನೀನು ಮಾತನಾಡು ಗುರು ಪರವಾಗಿಲ್ಲ, ನಮ್ಮ ತಂದೆನಂತೂ ನಿಮ್ಮ ಊರಿಗೆ ಕಳಿಸಲ್ಲ ಎಂದರು.  ಬೆಳಿಗ್ಗೆ ಕೂದಲು ಬಾಚಿಕೊಂಡು ಪ್ರೆಸ್ ಮೀಟ್ ಗೆ ಬರ್ತಿಯಲ್ಲ, ಆಗ ನಿನ್ನನ್ನು ನೀನು ನೋಡ್ಕೋ, ಮುಳ್ಳಂದಿ ನೀನಾ? ನಾನಾ? ಎಂದು ಪ್ರದೀಪ್ ಪ್ರಶ್ನಿಸಿದ್ರು.

ನೀನು ಗೌಡ್ರ ಕುಟುಂಬದಲ್ಲಿ ಹುಟ್ಟಿ ನೀನು ಗೌಡ್ರಿಗೆ ಎಷ್ಟು ಒಳ್ಳೆಯದು ಮಾಡಿದ್ದೀಯಾ? ನನ್ ಕ್ಷೇತ್ರದಲ್ಲಿ 3 ಸ್ಟೇಷನ್ ಸಬ್ ಇನ್ಸ್ ಪೆಕ್ಟರ್ ಗಳಿಗೆ ಗೌಡರನ್ನ ತಂದಿದ್ದೀನಿ. ಎಕ್ಸಿಕ್ಯೂಟಿವ್ ಆಫೀಸರ್ ಗೌಡ್ರನ್ನ ತಂದಿದ್ದೀನಿ. 2,500  ಗೌಡ್ರ ಮಕ್ಕಳಿಗೆ ಸ್ಕಾಲರ್ಷಿಪ್ ಕೊಟ್ಟಿದ್ದೀನಿ. ಎಷ್ಟೋ ಜನ ಮಕ್ಕಳಿಗೆ ಆರ್ಥಿಕ ಸಹಾಯ ಮಾಡ್ತೀನಿ. ನಾನು ಬೇಕಾದ್ರೆ ಪಟ್ಟಿ ಬಿಡುಗಡೆ ಮಾಡಲು ಸಿದ್ಧ ಮಗನೇ, ನೀನು ಸ್ಟೇಟ್ ನಲ್ಲಿರುವ ಗೌಡ್ರಿಗೆ ಏನು ಮಾಡಿದ್ದೀ ಅಂತ ಪಟ್ಟಿ ಬಿಡುಗಡೆ ಮಾಡು ಎಂದು ಸವಾಲು ಹಾಕಿದರು.

ಅವನು(ಪ್ರತಾಪ್ ಸಿಂಹ) ಕತ್ತಲಲ್ಲಿ ಹುಡುಕುವುದರಲ್ಲಿ ಬಿಝಿಯಾಗಿದ್ದಾನೆ. ನಾನು ಕತ್ತಲಲ್ಲಿ ಕಾಣಲ್ವಂತೆ, ನೀನು ಹುಡುಕು ಗುರು… ನನ್ನನ್ನು ಹುಡುಕ್ ಬೇಡ ಗುರು, ನಾನು ಆ ಥರ ಅಲ್ಲ ಪ್ರತಾಪ, 50—50 ಅದು ಪ್ರತಾಪನ ಫೇವರೆಟ್ ಬಿಸ್ಕೇಟ್ ಎಂದು ತಿರುಗೇಟು ನೀಡಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ