ಟಿವಿ ರಿಯಾಲಿಟಿ ಶೋಗಳಲ್ಲಿ ಡಬಲ್ ಮೀನಿಂಗ್, ಇದು ಬೇಕಾ ಅನ್ನಿಸುತ್ತದೆ: ರವಿಚಂದ್ರನ್ ಅಸಮಾಧಾನ - Mahanayaka
9:38 AM Wednesday 20 - August 2025

ಟಿವಿ ರಿಯಾಲಿಟಿ ಶೋಗಳಲ್ಲಿ ಡಬಲ್ ಮೀನಿಂಗ್, ಇದು ಬೇಕಾ ಅನ್ನಿಸುತ್ತದೆ: ರವಿಚಂದ್ರನ್ ಅಸಮಾಧಾನ

v ravichandran
07/04/2025


Provided by

ಟಿವಿ ರಿಯಾಲಿಟಿ ಶೋಗಳಲ್ಲಿ ಡಬಲ್ ಮೀನಿಂಗ್ ಡೈಲಾಗ್ ಗಳ ಬಗ್ಗೆ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಬೇಸರ ಹೊರ ಹಾಕಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಡಬಲ್ ಮೀನಿಂಗ್ ಡೈಲಾಗ್ ಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಡೆದ  ಕಾರ್ಯಕ್ರಮವೊಂದರಲ್ಲಿ ರವಿಚಂದ್ರನ್ ಮಾತನಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಾರ್ಯಕ್ರಮದಲ್ಲಿ ರವಿಚಂದ್ರನ್ ಮಕ್ಕಳಿಗೆ  ಸ್ಫೂರ್ತಿ ತುಂಬುವಂತೆ ಮಾತನಾಡಿದ್ದಾರೆ.

ನಾನು ಭರ್ಜರಿ ಬ್ಯಾಚುಲರ್ಸ್ ರೀತಿಯ ಶೋ ಮಾಡುತ್ತೇನೆ. ಬೆಳಿಗ್ಗೆ 10 ಗಂಟೆಗೆ ಶೋ ಆರಂಭ ಆದ್ರೆ, ರಾತ್ರಿ 11 ಗಂಟೆಯವರೆಗೂ ಶೋ ಶೂಟ್ ನಡೆಯುತ್ತದೆ. ಅಲ್ಲಲ್ಲಿ ತುಂಬು ಬೋರಾಗುತ್ತದೆ. ಸಿಟ್ಟು ಬರುತ್ತದೆ. ಡಬಲ್ ಮೀನಿಂಗ್ ಜಾಸ್ತಿ ಮಾಡುತ್ತಿದ್ದಾರೆ, ಇದು ಬೇಕಾ ಎನ್ನಿಸುತ್ತದೆ.

ಶೋ ಮುಗಿದ ಮೇಲೆ ವಿಟಿ ಹಾಕ್ತಾರೆ,  ನಾಲ್ಕು ತಿಂಗಳ ವಿಟಿ ಎರಡೂವರೆ ನಿಮಿಷ ಇರುತ್ತದೆ. ಅದೇ ರೀತಿ ಜೀವನದಲ್ಲಿ ಒಳ್ಳೆಯ ಕ್ಷಣಗಳನ್ನು ಕೂಡಿಕೊಂಡು ಹೋಗಬೇಕು. ಇಡೀ ದಿನ ಚೆನ್ನಾಗಿರಲ್ಲ. ಆದ್ರೆ ಒಂದು ಕ್ಷಣ ಚೆನ್ನಾಗಿರುತ್ತದೆ. ಅದನ್ನು ಹೆಚ್ಚು ಮಾಡಿದಂತೆ ಜೀವನ ಚೆನ್ನಾಗಿರುತ್ತದೆ ಎಂದು ರವಿಚಂದ್ರನ್ ಕಿವಿಮಾತು ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ