ಸರ್ಕಾರಿ ಕಚೇರಿಗಳಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಆಚರಣೆ ಬಗ್ಗೆ ಡಾ.ಜಿ.ಪರಮೇಶ್ವರ್ ಮಹತ್ವದ ಹೇಳಿಕೆ

ಸರ್ಕಾರಿ ಕಚೇರಿಗಳಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಆಚರಣೆ ವಿಚಾರದಲ್ಲಿ ಸರ್ಕಾರದಲ್ಲಿ ಬ್ಲೂಬುಕ್ ಇದೆ, ಅದರಲ್ಲಿ ಏನಿರುತ್ತೊ ಅದೇ ಆಗಬೇಕು. ಗೃಹ ಇಲಾಖೆಯಲ್ಲಿ ನಾನೊಂದು ಕಾನೂನು ಮಾಡಲು ಬರಲ್ಲ. ಇನ್ನೊಬ್ಬರು ಇನ್ನೊಂದು ಮಾಡಲು ಬರಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅದನ್ನು ಮುಂದಿನ ದಿನಗಳಲ್ಲಿ ನೋಡೋಣ. ಯಾವುದನ್ನು ಮಾಡಬಾರದು. ಯಾವುದನ್ನು ಮಾಡಬೇಕು ಎಂಬ ಬಗ್ಗೆ ಸರ್ಕಾರದ ನಿಯಮಗಳಿವೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಮಾನ್ಯೂಯಲ್ ಇದೆ. ಅದನ್ನು ಬಿಟ್ಟು ಬೇರೆ ಮಾಡಲು ಬರೊದಿಲ್ಲ. ಹಿರಿಯ ಅಧಿಕಾರಿಗಳು ಮಾನ್ಯೂಯಲ್ ಅನುಷ್ಟಾನ ಮಾಡುತ್ತಾರೆ. ನಾವು ವೈಯಕ್ತಿಯವಾಗಿ ಸಚಿವರಾಗಿದ್ದೇನೆ ಅಂತ ಪ್ರತ್ಯೇಕ ಕಾನೂನು ಮಾಡಲು ಬರಲ್ಲ. ಕುಂಕುಮ, ವಿಭೂತಿ, ಇಟ್ಟು ಕೊಳ್ಳಬಾರದು ಅಂತ ಹೇಳಿದ್ದೇನೆ ಅಂತ ವೈರಲ್ ಮಾಡಿದ್ದಾರೆ. ಅದನ್ನು ನಾನು ಹೇಳಿಯೇ ಇಲ್ಲ. ಯಾರು ವೈರಲ್ ಮಾಡಿದ್ದಾರೋ ಅವರನ್ನು ಹುಡುಕುತ್ತಿದ್ದೇವೆ. ಇಂತಹವನ್ನೆಲ್ಲಾ ಸುಮ್ಮನೆ ಬಿಡೊಕ್ಕೆ ಆಗಲ್ಲ. ನನಗೆ ಪ್ರಜ್ಞೆಯಿದೆ, ನಾನು ಮೂರು ಬಾರಿ ಗೃಹ ಸಚಿವರಾಗಿ ಅಧಿಕಾರವಹಿಸಿಕೊಂಡಿದ್ದೇನೆ ಎಂದರು.
ನಾನು ಗೃಹ ಸಚಿವನಾಗಿದ್ದಾಗ ಒಂದು ಕಾನೂನು ಮಾಡಲು ಹೋಗುವುದು, ಇನ್ನೊಬ್ಬರು ಇನ್ನೊಂದು ಕಾನೂನು ಮಾಡಲು ಅವಕಾಶವಿಲ್ಲ ಎಂದರು. ಸುಳ್ಳು ಸುದ್ದಿಗಳನ್ನು ಮಾಡಬಾರದು, ರಾಜ್ಯದಲ್ಲಿ ಶಾಂತಿ ಹಾಳಾಗುತ್ತದೆ, ಪ್ರಚೋದನೆಯಾಗುತ್ತದೆ. ರಾಜ್ಯದಲ್ಲಿ ಕೋಮು ಪ್ರೇರಿತ ಗಲಾಟೆಗಳು ಆಗಬಾರದು ಎಂಬುದು ನಮ್ಮ ನಿರೀಕ್ಷೆ- ಅಪೇಕ್ಷೆ . ನಮ್ಮ ಪ್ರಣಾಳಿಕೆ ಶೀರ್ಷಿಕೆ ಯಲ್ಲೇ ಸರ್ವ ಜನಾಂಗದ ಶಾಂತಿಯ ತೋಟ ಮಾಡ್ತಿವಿ ಅಂತಾ ಹೇಳಿದ್ದೇವೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw