ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿಕೊಂಡ ಡಾ.ವೀರೇಂದ್ರ ಹೆಗ್ಗಡೆ - Mahanayaka
3:33 PM Wednesday 22 - October 2025

ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿಕೊಂಡ ಡಾ.ವೀರೇಂದ್ರ ಹೆಗ್ಗಡೆ

puneeth rajkumar heggade
02/11/2022

ಬೆಳ್ತಂಗಡಿ: ಪುನೀತ್ ರಾಜ್ ಕುಮಾರ್ ಅವರು ಕರ್ನಾಟಕ ರತ್ನ ಪ್ರಶಸ್ತಿಗೆ ಅತ್ಯಂತ ಅರ್ಹರಾಗಿದ್ದವರು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.

ಕರ್ನಾಟಕ ರತ್ನ ಪ್ರಶಸ್ತಿ ಸಿಗುವ ಈ ಸಂದರ್ಭದಲ್ಲಿ ನಾನು ಆತನನ್ನು ಸ್ಮರಿಸುತ್ತೇನೆ ಎಂದ ಅವರು ಪುನೀತ್ ಅವರ ತಂದೆ ಡಾ. ರಾಜಕುಮಾರ್ ಅವರು ನನಗೆ ಅತ್ಯಂತ ಪ್ರೀತಿಯವರು, ಕ್ಷೇತ್ರದ ಬಗ್ಗೆ ಅಪಾರವಾದ ಗೌರವ ಇದ್ದವರು. ಅವರ ಪುತ್ರನಾಗಿದ್ದ ಪುನೀತ್ ತನ್ನ ವೈಯಕ್ತಿಕ ವ್ಯಕ್ತಿತ್ವ, ನಟನೆ, ಸ್ನೇಹ ಸ್ವಭಾವದಿಂದಾಗಿ ಎಲ್ಲರ ಪ್ರೀತಿ ಪಾತ್ರರಾಗಿ, ಎಲ್ಲರಿಗೂ ಅಚ್ಚು ಮೆಚ್ಚಾಗಿ ಬೆಳೆದವರು ಎಂದರು.

ಅವರ ಸಾವು ಇನ್ನೂ ನಮಗೆ ಅರಗಿಸಿಕೊಳ್ಳಲಿಕ್ಕೆ ಆಗಲಿಲ್ಲ. ಪುನೀತನನ್ನು ನಾನು ಸ್ಮರಿಸಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತ ಕರ್ನಾಟಕ ರತ್ನ ಪ್ರಶಸ್ತಿಗೆ ಪುನೀತ್ ಅರ್ಹರಾದ ವ್ಯಕ್ತಿ. ನಾವು ಕೂಡ ಕನ್ನಡದ ಸೇವೆ, ಕನ್ನಡ ಕಲಾರಂಗದ ಸೇವೆ ಮಾಡಿದರೆ, ಸ್ನೇಹ ಪರವಾಗಿದ್ದರೆ ಹೇಗೆ ಜನ ಮತ್ತು ಸರ್ಕಾರ ನಮ್ಮನ್ನು ಸ್ಮರಿಸಿಕೊಳ್ಳುತ್ತದೆ ಎಂಬುದಕ್ಕೆ ಇದು ಮಾದರಿಯಾಗಿದೆ. ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾದ ಪುನೀತ್ಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಆತನ ಪುಣ್ಯದಿಂದ ಮತ್ತಷ್ಟು ಕಲಾವಿದರು ಬೆಳೆದು ಬರಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ