ಚಕ್ರವರ್ತಿ ಸೂಲಿಬೆಲೆ ಅಂದ್ರೆ ಯಾರು ಅಂತ ಗೊತ್ತಿಲ್ಲ ಎಂದ ಡ್ರೋನ್ ಪ್ರತಾಪ್!

‘ಡ್ರೋನ್ ಪ್ರತಾಪ್’ ಈ ಹೆಸರು ಕೇಳಿದ ತಕ್ಷಣವೇ ಸಾಕಷ್ಟು ಜನರು ವ್ಯಂಗ್ಯದಿಂದ ನೋಡ್ತಾರೆ. ತಾನೇನೋ ಸಾಧಿಸಿದ್ದೇನೆ ಎಂದು ತೋರಿಸಿ, ಹಲವು ವಿಡಿಯೋಗಳಲ್ಲಿ ಮಾತನಾಡಿದ್ದ ಪ್ರತಾಪ್ ಮಾತುಗಳು ಸುಳ್ಳು ಎನ್ನುವುದು ತಿಳಿಯುತ್ತಿದ್ದಂತೆಯೇ ಭಾರೀ ಟ್ರೋಲ್ ಆಗಿತ್ತು. ಒಂದು ಹಂತದಲ್ಲಿ ಭಾರೀ ಜನಪ್ರಿಯಗೊಂಡಿದ್ದ ಪ್ರತಾಪ್ ಹೆಸರು ನಗೆ ಪಾಟಲಿಗೀಡಾಗಿತ್ತು.
ಈ ಘಟನೆಯ ಬಳಿಕ ಸಾಕಷ್ಟು ಸಮಯಗಳವರೆಗೆ ಡ್ರೋನ್ ಪ್ರತಾಪ್ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ರಿಯಲ್ ಡ್ರೋನ್ ಗಳ ಮೂಲಕ ವಿವಿಧ ಯೂಟ್ಯೂಬ್ ಚಾನೆಲ್ ಗಳಲ್ಲಿ ಕಾಣಸಿಗುತ್ತಿದ್ದಾರೆ.
ಹೌದು… ಡ್ರೋನ್ ಪ್ರತಾಪ್ ಇದೀಗ ನಿಜವಾದ ಡ್ರೋನ್ ಗಳಿಗಾಗಿ ಸುದ್ದಿಯಲ್ಲಿದ್ದಾರೆ. ಕರ್ನಾಟಕದ ನಾನಾ ಭಾಗದ ರೈತರಿಗೆ ಡ್ರೋನ್ ಮೂಲಕ ಹೇಗೆ ಔಷಧಿ ಸಿಂಪಡಿಸುವುದು ಎನ್ನುವ ಪ್ರಾತ್ಯಕ್ಷಿಕೆಗಳನ್ನು ತೋರಿಸುತ್ತಿದ್ದು, ಈ ಮೂಲಕ ಹೊಸ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅಡಿಕೆ, ಕಬ್ಬು, ಭತ್ತ ಹೀಗೆ ವಿವಿಧ ಕೃಷಿಗಳಿಗೆ ಡ್ರೋನ್ ಬಳಸಿ ಔಷಧಿ ಸಿಂಪಡಿಸುವ ಬಗ್ಗೆ ಮಾಹಿತಿ ನೀಡುತ್ತಾ ಡ್ರೋನ್ ಪ್ರತಾಪ್ ಜನರಿಗೆ ಹತ್ತಿರವಾಗ್ತಿದ್ದಾರೆ.
ಇದೇ ಸಂದರ್ಭದಲ್ಲಿ ಯೂಟ್ಯೂಬ್ ಚಾನೆಲ್ ವೊಂದು ಡ್ರೋನ್ ಪ್ರತಾಪ್ ನ್ನು ಸಂದರ್ಶನ ಮಾಡಿತ್ತು. ಸಂದರ್ಶಕ “ಡ್ರೋನ್ ಪ್ರತಾಪ್ ಗೆ ಚಕ್ರವರ್ತಿ ಸೂಲಿಬೆಲೆ ಅವರೊಂದಿಗೆ ನಿಂತಿರುವ ನಿಮ್ಮ ಫೋಟೋ ಟ್ರೋಲ್ ಆಗಿತ್ತು. ಅದರ ಬಗ್ಗೆ ನಿಮ್ಮ ಕ್ಲಾರಿಫಿಕೇಶನ್ ಏನು” ಎಂದು ಪ್ರಶ್ನಿಸುತ್ತಿದ್ದಂತೆಯೇ, “ಅವರ್ಯಾರು?” ಎಂದು ಡ್ರೋನ್ ಪ್ರತಾಪ್ ಮರು ಪ್ರಶ್ನೆ ಹಾಕಿದ್ದಾರೆ.
ಈ ವೇಳೆ ಸ್ವತಃ ಸಂದರ್ಶಕ ಶಾಕ್ ಗೊಳಗಾಗಿದ್ದಾರೆ. ಮುಂದುವರಿದು ಮಾತನಾಡಿದ ಪ್ರತಾಪ್, “ಅವರು ಯಾರು ಅಂತನೇ ನನಗೆ ಗೊತ್ತಿಲ್ಲ…” ಎಂದಿದ್ದಾರೆ. ಈ ವೇಳೆ ಸಂದರ್ಶಕ, ಚಕ್ರವರ್ತಿ ಸೂಲಿಬೆಲೆ ಅವರು ವಾಗ್ಮಿಗಳು, ಲೇಖಕರು, ಏನೇನೋ ಬರಿತಾ ಇರ್ತಾರೆ, ಅವರನ್ನು ನೀವು ಯಾವತ್ತಾದ್ರೂ ಭೇಟಿ ಮಾಡಿದ್ರಾ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪ್ರತಾಪ್ ಇಲ್ಲ, ಆಥರದವರು ಯಾರನ್ನೂ ಭೇಟಿ ಮಾಡಿಲ್ಲ ಎಂದಿದ್ದಾರೆ.
ಇನ್ನೂ ಖಾಸಗಿ ಚಾನೆಲ್ ನಲ್ಲಿ ನಡೆದ ಸಂದರ್ಶನದಲ್ಲಿ ನಿಮ್ಮನ್ನು ಸಿಕ್ಕಿಸಿ ಹಾಕುವ ಪ್ರಯತ್ನ ನಡೆಯಿತೇ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ ಎಂದರು.
ವಿಡಿಯೋ ನೋಡಲು ಲಿಂಕ್ ಗೆ ಕ್ಲಿಕ್ ಮಾಡಿ: https://fb.watch/lx4357jwZL/
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw