ಕುಡಿತದ ಮತ್ತಿನಲ್ಲಿ ಹಾವಿಗೆ ಕಿಸ್: ಹಾವು ಕಚ್ಚಿ ಯುವಕ ಸಾವು
06/11/2023
ಉತ್ತರ ಪ್ರದೇಶ: ಕುಡಿತದ ಮತ್ತಿನಲ್ಲಿ ಯುವಕನೋರ್ವ ಹಾವಿಗೆ ಮುತ್ತಿಕ್ಕಲು ಮುಂದಾಗಿದ್ದು, ಈ ವೇಳೆ ಹಾವು ಕಚ್ಚಿದ ಪರಿಣಾಮ ಯುವಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ.
ಅಹಿರೌಲಿ ಗ್ರಾಮದ ರೋಹಿತ್ ಜೈಸ್ವಾಲ್ ಮೃತ ಯುವಕನಾಗಿದ್ದಾನೆ. ಮದ್ಯದ ಅಮಲಿನಲ್ಲಿ ಈತ ಹಾವಿನೊಂದಿಗೆ ಆಟವಾಡಲು ಮುಂದಾಗಿದ್ದಾನೆ. ಜೊತೆಗೆ ವಿಡಿಯೋ ಕೂಡ ಮಾಡಿಕೊಂಡಿದ್ದಾನೆ. ಕ್ರೈಟ್ ಎಂಬ ಹಾವನ್ನು ಕೈಗೆ ಸುತ್ತಿಕೊಂಡು, ನಾಲಿಗೆ ತೋರಿಸಿ ಕಚ್ಚುವಂತೆ ಸವಾಲು ಹಾಕಿರೋದಲ್ಲದೇ ಸಿಗರೇಟ್ ಸೇದಿ, ಹಾವಿಗೆ ಹೊಡೆಯುವುದು, ಮುತ್ತುಕೊಡುವುದು ಹೀಗೆ ಹುಚ್ಚಾಟ ಆಡಿದ್ದಾನೆ.
ಹಾವಿನೊಂದಿಗೆ ಜೈಸ್ವಾಲ್ ಆಟವಾಡುತ್ತಿರುವ 4 ನಿಮಿಷ 38 ಸೆಕೆಂಡುಗಳ ವಿಡಿಯೋ ಇದೀಗ ವೈರಲ್ ಆಗಿದೆ. ಹಾವು ಕಚ್ಚಿದ ಬಳಿಕ ಜೈಸ್ವಾಲ್ ಸಾವನ್ನಪ್ಪಿದ್ದಾನೆ.




























