ಟಿಕೆಟ್ ಕೇಳಿದ್ದಕ್ಕೆ ಟಿಟಿಇಯನ್ನು ರೈಲಿನಿಂದ ಹೊರಕ್ಕೆ ತಳ್ಳಿದ ಕುಡುಕ: ಟಿಟಿಇ ಸಾವು

ವಡಂಕ್ಕಚೇರಿ: ಟಿಕೆಟ್ ಕೇಳಿದ್ದಕ್ಕೆ ಯುವಕನೋರ್ವ ಟಿಟಿಇಯನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆ ತಳ್ಳಿರುವ ಆಘಾತಕಾರಿ ಘಟನೆ ಕೇರಳದ ಎರ್ನಾಕುಳಂ—ಪಾಟ್ನಾ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ.
ಮಂಗಳವಾರ ಸಂಜೆ 7 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಎರ್ನಾಕುಲಂ—ಪಾಟ್ನಾ ಎಕ್ಸ್ ಪ್ರೆಸ್ ನ ಎಸ್ 11 ಕೋಚ್ ನಲ್ಲಿ ಟಿಟಿಇ ಇ.ಕೆ. ವಿನೋದ್ ಅವರು ವ್ಯಕ್ತಿಯೋರ್ವನ ಬಳಿ ಟಿಕೆಟ್ ಕೇಳಿದ್ದಾರೆ. ಈ ವೇಳೆ ವ್ಯಕ್ತಿ ಏಕಾಏಕಿ ವಿನೋದ್ ಅವರನ್ನು ರೈಲಿನಿಂದ ಹೊರಕ್ಕೆ ತಳ್ಳಿದ್ದಾನೆ.
ಮುಳಂಗನ್ನುತುಕಾವು ಮತ್ತು ವಡಂಕ್ಕಚೇರಿ ನಿಲ್ದಾಣದ ನಡುವಿನ ವೆಲಪ್ಪಯ ಎಂಬಲ್ಲಿ ಈ ಘಟನೆ ನಡೆದಿದೆ. ರೈಲಿನಿಂದ ಕೆಳಗೆ ಬಿದ್ದ ಟಿಟಿಇ ವಿನೋದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆರೋಪಿ ಒಡಿಶಾ ಮೂಲದವನು ಎಂದು ಹೇಳಲಾಗಿದ್ದು, ವಲಸೆ ಕಾರ್ಮಿಕನಾಗಿದ್ದಾನೆ. ಪ್ರಾಥಮಿಕ ತನಿಖೆಯ ವೇಳೆ ಆರೋಪಿ ಕುಡಿತದ ಮತ್ತಿನಲ್ಲಿರುವುದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth