ಮದ್ಯದ ಮತ್ತಿನಲ್ಲಿ ಹೆತ್ತ ತಾಯಿಯನ್ನೇ ಕಟ್ಟಿಗೆಯಿಂದ ಹೊಡೆದು ಹತ್ಯೆ!

05/02/2024
ಕಲಬುರಗಿ: ಮದ್ಯದ ಅಮಲಿನಲ್ಲಿ ಕ್ಷುಲಕ ಕಾರಣಕ್ಕೆ ಹೆತ್ತ ತಾಯಿಯನ್ನೇ ಮಗ ಕಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋಚಾವರಂನಲ್ಲಿ ನಡೆದಿದೆ.
ಅನೀಲ್ ಎಂಬಾತ ಹೆತ್ತಮ್ಮನನ್ನು ಕೊಲೆಗೈದ ಆರೋಪಿಯಾಗಿದ್ದಾನೆ. ಮೃತರನ್ನು ಶೋಭಾ (45) ಎಂದು ಗುರುತಿಸಲಾಗಿದೆ.ಕೊಲೆ ಆರೋಪಿ ಅನೀಲ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಕೊಂಚಾವರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮದುವೆ ಮಾಡಿಸಿಲ್ಲ ಎಂದು ಕೊಲೆ?
ಕುಡಿತ ನಶೆಯಲ್ಲಿ ಬಂದಿದ್ದ ಅನಿಲ್ ತನಗೆ ಯಾಕೆ ಮದುವೆ ಮಾಡಿಸಿಲ್ಲ ಎಂದು ತಾಯಿಯ ಜೊತೆಗೆ ಜಗಳವಾಡಿದ್ದು, ಅಲ್ಲೇ ಇದ್ದ ಕಟ್ಟಿಗೆಯಿಂದ ತಾಯಿಗೆ ಹೊಡೆದಿದ್ದಾನೆ. ಈ ವೇಳೆ ತೀವ್ರ ರಕ್ತ ಸ್ರಾವದಿಂದ ಮಹಿಳೆ ಮೂರ್ಛೆ ಹೋಗಿದ್ದು, ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.