ಅದ್ದೂರಿ ವೆಲ್‌ಕಂ: ಫ್ರಾನ್ಸ್ ಟು ಯುಎಇಗೆ ನಮೋ ಪ್ರಯಾಣ: ದುಬೈಯ ಬುರ್ಜ್ ಖಲೀಫಾದಲ್ಲಿ ಮೋದಿ ಫೋಟೋ ಹಾಕಿ ಸ್ವಾಗತ - Mahanayaka
12:57 AM Thursday 18 - December 2025

ಅದ್ದೂರಿ ವೆಲ್‌ಕಂ: ಫ್ರಾನ್ಸ್ ಟು ಯುಎಇಗೆ ನಮೋ ಪ್ರಯಾಣ: ದುಬೈಯ ಬುರ್ಜ್ ಖಲೀಫಾದಲ್ಲಿ ಮೋದಿ ಫೋಟೋ ಹಾಕಿ ಸ್ವಾಗತ

15/07/2023

ಫ್ರಾನ್ಸ್ ಪ್ರವಾಸ ಮುಗಿಸಿ ಯುಎಇಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದರು. ಇದೇ ವೇಳೆ ಅವರ ಭಾವಚಿತ್ರವನ್ನು ವಿಶ್ವವಿಖ್ಯಾತ ಅತಿ ಎತ್ತರದ ಕಟ್ಟಡವಾದ ದುಬೈಯ ಬುರ್ಜ್ ಖಲೀಫಾದಲ್ಲಿ ಅನಾವರಣಗೊಳಿಸಿ ಅದ್ದೂರಿಯಾಗಿ ಸ್ವಾಗತ ನೀಡಲಾಯಿತು.
ಎರಡು ರಾಷ್ಟ್ರಗಳ ನಡುವಿನ ಸುಮಧುರ ಬಾಂಧವ್ಯದ ಪ್ರತೀಕವಾಗಿ ಚಿತ್ರಿಸಿದ ಈ ಪ್ರದರ್ಶನದಲ್ಲಿ ಮೊದಲಿಗೆ ಭಾರತದ ತ್ರಿವರ್ಣ ಧ್ವಜ, ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಪ್ರದರ್ಶನಗೊಳಿಸಿ ಬಳಿಕ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾಗತ ಎನ್ನುವ ಸಂದೇಶವನ್ನು ಹಾಕಲಾಗಿದೆ. ಕೆಲವು ನಿಮಿಷಗಳ ಕಾಲ ಇದನ್ನು ಪ್ರದರ್ಶನಗೊಳಿಸಲಾಗಿದೆ.
ಯುಎಇ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು.
ಪ್ರಧಾನಿ ಮೋದಿ ಅವರ ಅಬುಧಾಬಿಯ ಭೇಟಿಯಲ್ಲಿ ಅನೇಕ ವಿಚಾರಗಳನ್ನು ಚರ್ಚೆ ನಡೆಸಲಿದ್ದಾರೆ. ಮುಖ್ಯವಾಗಿ ಯುಎಇ ಅಧ್ಯಕ್ಷರಾದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಇಂಧನ, ಆಹಾರ ಭದ್ರತೆ ಮತ್ತು ರಕ್ಷಣೆಯು ಕೇಂದ್ರೀಕೃತ ಪ್ರದೇಶಗಳ ಬಗ್ಗೆ ಚರ್ಚೆ ನಡೆಸಲಿದ್ದು ಎರಡೂ ರಾಷ್ಟ್ರಗಳು ಹಲವು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

 

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ