ಪ್ರೀತಿಸಿದಾಕೆ ಕರೆ ಸ್ವೀಕರಿಸಲಿಲ್ಲ ಎಂದು ಯುವಕನಿಂದ ದುಡುಕಿನ ನಿರ್ಧಾರ - Mahanayaka
2:53 AM Thursday 16 - October 2025

ಪ್ರೀತಿಸಿದಾಕೆ ಕರೆ ಸ್ವೀಕರಿಸಲಿಲ್ಲ ಎಂದು ಯುವಕನಿಂದ ದುಡುಕಿನ ನಿರ್ಧಾರ

06/03/2021

ಕೋಲಾರ: ಪ್ರೀತಿಸಿದ ಯುವತಿ ಕರೆ ಸ್ವೀಕರಿಸಲಿಲ್ಲ ಎಂದು ನೊಂದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲೂಕಿನ ಶಿವಾರಪಟ್ಟಣ ಗ್ರಾಮದಲ್ಲಿ ನಡೆದಿದೆ.


Provided by

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕೊರಟಿ ಗ್ರಾಮದ 34 ವರ್ಷ ವಯಸ್ಸಿನ ಮನೋಜ್ ಕುಮಾರ್ ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ.

ಗುರುವಾರ ಜಲಗಾರನಾಗಿ ಕೆಲಸ ಮಾಡುತ್ತಿದ್ದ ಮನೋಜ್, ಗುರುವಾರ ರಾತ್ರಿ ಕೆಲಸಕ್ಕೆ ಆಗಮಿಸಿದ್ದ. ತಾನು ಪ್ರೀತಿಸುತ್ತಿದ್ದ ಯುವತಿಗೆ ಕರೆ ಮಾಡಿದ್ದು, ಆಕೆ ಕರೆ ಸ್ವೀಕರಿಸಲಿಲ್ಲ ಎಂದು ಬೇಸರಗೊಂಡು ಪಂಪ್ ಹೌಸ್ ಕಟ್ಟಡದ ಸಮೀಪ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.,

ಘಟನಾ ಸ್ಥಳಕ್ಕೆ ಮಾಲೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತ ಮನೋಜ್ ಶಿವಾರಪಟ್ಟಣ ಗ್ರಾಮದಲ್ಲಿ ಕೆಸಿ ವ್ಯಾಲಿ ಯೋಜನೆಯಡಿಯಲ್ಲಿ ಸ್ಥಾಪಿಸಿರುವ  ಪಂಪ್ ಹೌಸ್ ನಲ್ಲಿ ಒಂದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ