ಎತ್ತಿನ‌ಗಾಡಿ ಸ್ಪರ್ಧೆಯ ವೇಳೆ ಎತ್ತಿನ ಗಾಡಿಯ ನೊಗ ತಲೆಗೆ ಬಡಿದು ಯುವಕ ಸ್ಥಳದಲ್ಲೇ ಸಾವು - Mahanayaka

ಎತ್ತಿನ‌ಗಾಡಿ ಸ್ಪರ್ಧೆಯ ವೇಳೆ ಎತ್ತಿನ ಗಾಡಿಯ ನೊಗ ತಲೆಗೆ ಬಡಿದು ಯುವಕ ಸ್ಥಳದಲ್ಲೇ ಸಾವು

ajjampura
11/09/2023


Provided by

ಚಿಕ್ಕಮಗಳೂರು: ಎತ್ತಿನ‌ಗಾಡಿ ಸ್ಪರ್ಧೆಯ ವೇಳೆ ಎತ್ತಿನ ಗಾಡಿಯ ನೊಗ ಬಡಿದು ಯುವಕನೋರ್ವ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.

ಅಜ್ಜಂಪುರದಲ್ಲಿ ಜೋಡಿ ಎತ್ತಿನ ಗಾಡಿ ಸ್ಪರ್ಧೆ ನಡೆಯುತ್ತಿತ್ತು. ಈ ವೇಳೆ ವೇಗವಾಗಿ ಬರುತ್ತಿದ್ದ ಎತ್ತಿನ ಗಾಡಿಯ ನೊಗ ಭರತ್ (25) ಎಂಬ ಯುವಕನ ತಲೆಗೆ ಬಡಿದಿದ್ದು ಪರಿಣಾಮವಾಗಿ ಭರತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸ್ಪರ್ಧೆಯ ಕೊನೆಯಲ್ಲಿ ಎತ್ತುಗಳ ನೊಗ ಹಿಡಿದು ನಿಲ್ಲಿಸಲು ಮುಂದಾದಾಗ ಈ ಘಟನೆ ನಡೆದಿದೆ. ಫೈನಲ್ ಸುತ್ತಿನ ಅಂತಿಮ ಸ್ಪರ್ಧೆ ಇದಾಗಿತ್ತು. ವೇಗವಾಗಿ ಬರುತ್ತಿದ್ದ ಎತ್ತಿನ ಗಾಡಿಯನ್ನು ನಿಲ್ಲಿಸಲು ಭರತ್ ಪ್ರಯತ್ನಿಸುತ್ತಿದ್ದ ವೇಳೆ ನೊಗ ತಲೆಗೆ ಬಡಿದಿದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿ