ರಮೇಶ್ ಜಾರಕಿಹೊಳಿ ಕೇಸ್ ಗೆ ಹೊಸ ಟ್ವಿಸ್ಟ್: ದೂರು ವಾಪಸ್ ಪಡೆದ ದಿನೇಶ್ ಕಲ್ಲಹಳ್ಳಿ - Mahanayaka

ರಮೇಶ್ ಜಾರಕಿಹೊಳಿ ಕೇಸ್ ಗೆ ಹೊಸ ಟ್ವಿಸ್ಟ್: ದೂರು ವಾಪಸ್ ಪಡೆದ ದಿನೇಶ್ ಕಲ್ಲಹಳ್ಳಿ

07/03/2021


Provided by

ಬೆಂಗಳೂರು: ದೇಶಾದ್ಯಂತ ಸಂಚಲನ ಮೂಡಿಸಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ದೂರು ನೀಡಿದ್ದ ದಿನೇಶ್ ಕಲ್ಲಹಳ್ಳಿ ಇದೀಗ ದೂರು ವಾಪಸ್ ಪಡೆದುಕೊಂಡಿದ್ದಾಳೆ.

ದಿನೇಶ್ ಕಲ್ಲಹಳ್ಳಿ ತಮ್ಮ ವಕೀಲರನ್ನು ದೂರು ವಾಪಸ್ ಪಡೆಯಲು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕಳುಹಿಸಿದ್ದು, ನಿಯಮಾನುಸಾರ ದೂರು ವಾಪಸ್ ಪಡೆಯಬೇಕಿರುವ ಹಿನ್ನೆಲೆಯಲ್ಲಿ ಅವರೇ ಠಾಣೆಗೆ ಆಗಮಿಸಿ ದೂರು ಪಡೆಯಲು ನಿರ್ಧರಿಸಿದ್ದಾರೆ.

 ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು 5 ಕೋಟಿ ಡೀಲ್ ಬಗ್ಗೆ ಮಾತಾಡಿದ್ದರಿಂದ ನನ್ನ ಮನಸ್ಸಿಗೆ ನೋವಾಗಿದೆ. ಜನ ನನ್ನನ್ನು ನೈತಿಕತೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಇದು ನನಗೆ ತಿರುಗುಬಾಣವಾಗಿದೆ ಎಂದು ದೂರುದಾರ ದಿನೇಶ್ ಹೇಳಿದ್ದು, ಈ ಹಿನ್ನೆಲೆಯಲ್ಲಿ ತಾನು ದೂರು ವಾಪಸ್ ಪಡೆಯುತ್ತಿರುವುದಾಗಿ ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ